Saturday, January 25, 2025
ಸುದ್ದಿ

ಉಡುಪಿ : ಮಳೆಯ ಅಬ್ಬರ ಕಡಿಮೆಯಾಗಿ ಪ್ರಕ್ಷುಬ್ಧಗೊಂಡ ಸಮುದ್ರ ; ಮತ್ತೆ ಬೇಟೆಗೆ ಸಮುದ್ರಕ್ಕಿಳಿದ ಮೀನುಗಾರರು – ಕಹಳೆ ನ್ಯೂಸ್

ಉಡುಪಿ : ಉಡುಪಿಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿ, ಪ್ರಕ್ಷುಬ್ಧಗೊಂಡ ಸಮುದ್ರ ಶಾಂತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ನಾಡದೋಣಿ ಮೀನುಗಾರರು ಮತ್ಸ್ಯ ಬೇಟೆಗೆ ಸಮುದ್ರಕ್ಕಿಳಿದಿದ್ದಾರೆ. ಆದರೆ ಕಡಲಿಗೆ ಇಳಿದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಮತ್ಸ್ಯ ಕ್ಷಾಮ ತಲೆದೂರಿ, ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ನಷ್ಟ ಅನುಭವಿಸುವಂತಾಗಿದೆ.
ಕೆಲ ಮೀನುಗಾರರು, ಇದರಿಂದ ದೋಣಿಯನ್ನೇ ಮಾರಾಟ ಮಾಡಿದ್ದು, ಇದ್ದ ದೋಣಿಯವರಿಗೂ ಮೀನು ಅಲಭ್ಯತೆ ಸಮಸ್ಯೆ ಆಗಿದೆ. ಕಳೆದ ವರ್ಷ ಸಂಜೆವರೆಗೂ ಮೀನುಗಾರಿಕೆ ನಡೆಸಿ, ಹೇರಳ ಮೀನಿನೊಂದಿಗೆ ದಡಕ್ಕೆ ಬರುತ್ತಿದ್ದ ಮೀನುಗಾರರು, ಸದ್ಯ ಮೀನಿನ ಕೊರತೆಯಿಂದ ಮಧ್ಯಾಹ್ನವೇ ದಡಕ್ಕೆ ಮರಳುತ್ತಿದ್ದಾರೆ.
ನೆರೆಯ ಸಿಹಿ ನೀರು ಸಮುದ್ರಕ್ಕೆ ಸೇರಿದ್ರೂ, ನಿರೀಕ್ಷಿತ ಪ್ರಮಾಣದ ಮೀನುಗಳು ಸಿಗದೇ ಆತಂಕಗೊAಡ ಕೆಲ ಮೀನುಗಾರರು, ತಾವು ನಂಬಿರುವ ಬೊಬರ್ಯ ದೈವದಲ್ಲಿ ಹೆಚ್ಚಿನ ಮೀನುಗಳು ಸಿಗಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದಾರೆ.