ಬೈಂದೂರು : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್ ನಲ್ಲಿ ನಿನ್ನೆ ಮಧ್ಯಾಹ್ನದ ವೇಳೆ ಗದಗ್ ಮೂಲದ ಮೂವರು ಯುವಕರು ಬೀಚ್ ನಲ್ಲಿ ಈಜಲು ಹೋಗಿ ಓರ್ವ ಯುವಕ ಸಮುದ್ರದ ಅಬ್ಬರದ ಅಲೆಗೆ ಸಿಲುಕಿದ ನೀರು ಪಾಲಾದ ಗದಗ ಜಿಲ್ಲೆಯ ಮುಂಡ್ರoಗಿ ತಾಲೂಕು ಮೇವಂಡಿ ಗ್ರಾಮದ ಪ್ರಾಯದ ಪೀರ್ ನದಾಫ್, ಯುವಕನ ಮೃತ ದೇಹ ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆ ಬಳಿ ಪತ್ತೆಯಾಗಿದೆ,ಯುವಕ ಕಳೆದ ನಾಲ್ಕು ವರ್ಷಗಳಿಂದ ಪಡುಬಿದ್ರಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿರುತ್ತಾನೆ, ನಿನ್ನೆಯ ದಿನ ನಾನು ಊರಿಗೆ ಹೋಗಿ ಬರುತ್ತೇನೆ ಎಂದು ಸ್ನೇಹಿತರ ಜೊತೆ ಹೇಳಿ ಬಂದಿದ್ದಾನೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಅಂಬಿಕಾ ಖಾರ್ವಿ ಮಹಿಳೆ ಮನೆಯ ಬಳಿ ಸಮುದ್ರದ ಹತ್ತಿರ ಹೋಗುತ್ತಿರುವಾಗ ಸಮುದ್ರದಲ್ಲಿ ತೇಲಾಡುತ್ತಿರುವ ಮೃತ ದೇಹ ನೋಡಿ ಗುಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಗಂಗೊಳ್ಳಿ ಪೊಲೀಸ್ ಸಿಬ್ಬಂದಿಗಳು ಹಾಗೂ ಜೀವ ರಕ್ಷಕ ಈಜು ತಜ್ಞ ದಿನೇಶ್ ಖಾರ್ವಿ ತಂಡ, ಆಂಬುಲೆನ್ಸ್ ಡ್ರೈವರ್ ಇಬ್ರಾಹಿಂ ಗಂಗೊಳ್ಳಿ ಯವರ ತಂಡ, ಗಂಗೊಳ್ಳಿ ಕರಾವಳಿ ಪೊಲೀಸ್ ನಾಗರಾಜ್ ಖಾರ್ವಿ ಹಾಗೂ ಸಿಬ್ಬಂದಿಗಳು, ಕೋಸ್ಟಲ್ ಗಾರ್ಡ್ ನವರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ನೀರಿನಿಂದ ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆಗೆ ರವನಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.