Friday, January 24, 2025
ಸುದ್ದಿ

ಇತಿಹಾಸ ಪ್ರಸಿದ್ಧ ಶಿವಳ್ಳಿ ಶೀಂಬ್ರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಸ್ನಾನಘಟ್ಟ ಕುಸಿತ : ಮಣ್ಣು ಕುಸಿಯದಂತೆ ತಾತ್ಕಲಿಕ ತರ್ಪಾಲ್ ಅಳವಡಿಕೆ – ಕಹಳೆ ನ್ಯೂಸ್

ಶಿವಳ್ಳಿ ಶೀಂಬ್ರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಇಲ್ಲಿ ನಾನ್ನೂರು ವರ್ಷಗಳ ಹಿಂದೆ ಸೋದೆ ಮಠಾಧೀಶರಾಗಿದ್ದ ಶ್ರೀ ವಾದಿರಾಜ ಗುರು ಸಾರ್ವಭೌಮರು, ಕ್ಷೇತ್ರದ ಬಗ್ಗೆ ತೀರ್ಥ ಪ್ರಬಂಧದಲ್ಲಿ ವಿಶೇಷ ಉಲ್ಲೇಖ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಹರಿಯುವ ಸ್ವರ್ಣ ನದಿಯಲ್ಲಿ ಕೃಷ್ಣಾಂಗಾರ್ಕ ಚತುರ್ದಶಿಯ ದಿನ ಮಿಂದರೆ ಪಾಪಗಳೆಲ್ಲಾ ತೊಳೆದು ಹೋಗುತ್ತೆ ಅನ್ನೋ ನಂಬಿಕೆ ಇದೆ. ಆಗಸ್ಟ್ 15 ರಂದು ಉಡುಪಿ ಮಾತ್ರವಲ್ಲದೆ ನಾಡಿನ ಅನೇಕ ಭಾಗಗಳಿಂದ ಸಾವಿರಾರು ಜನ ಇಲ್ಲಿ ಪುಣ್ಯ ಸ್ನಾನ ಕೈಗೊಳ್ಳಲು ಬರುತ್ತಾರೆ.

ಹೀಗೆ ಬಂದವರು ನೀರಿಗಿಳಿಯಲು ಸದ್ಯ ಯಾವುದೇ ಸಂಪರ್ಕವಿಲ್ಲ. ಸ್ನಾನಘಟ್ಟ ಕುಸಿಯುತ್ತಿರುವುದರಿಂದ ದೇವಾಲಯದ ಅಂಚಿನ ಮಣ್ಣು ಕೂಡ ಸಂಪೂರ್ಣ ಜರಿದಿದೆ. ತಾತ್ಕಾಲಿಕವಾಗಿ ಮಠದವರು ತರ್ಪಾಲ್ ಅಳವಡಿಸಿ ಮಣ್ಣು ಕುಸಿಯದಂತೆ ಎಚ್ಚರಿಕೆ ವಹಿಸಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ.

ಅರ್ಧಕ್ಕೆ ಮಟಕಗೊಂಡ ಸ್ನಾನಘಟ್ಟದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಕರಾವಳಿಯ ಪ್ರಸಿದ್ಧ ಕ್ಷೇತ್ರವನ್ನು ಅಪಾಯದಿಂದ ಪಾರು ಮಾಡಬೇಕು ಎಂದು ಭಕ್ತರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.