ಚಿಕ್ಕಮಗಳೂರು: ಪ್ರಸ್ತುತ ರಾಜಕೀಯಕ್ಕೆ ನಾನು ಫುಲ್ ಸ್ಟಾಪ್ ಹಾಕಿದ್ದೇನೆ, ವಿರೋಧ ಪಕ್ಷ, ಕಾಂಗ್ರೆಸ್ ಸ್ನೇಹಿತರು, ಬೇರೆ ಬೇರೆ ರೀತಿ ಮಾತನಾಡುತ್ತಾರೆ, ನಾನು ಅದಕ್ಕೆಲ್ಲ ಉತ್ತರ ನೀಡಲ್ಲ, ಬಹುಶ: ಇದಲ್ಲಾ ಅಂತ್ಯವಾಗುತ್ತೆ ಎಂಬ ನಂಬಿಕೆ ನನಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಇನ್ನು ಒಂದು ತಿಂಗಳಲ್ಲಿ ಮೈತ್ರಿ ಸರ್ಕಾರದ ಗೊಂದಲಗಳೆಲ್ಲಾ ಬಗೆಹರಿಯುತ್ತದೆ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶಕ್ಕಾದ್ರು ಅಂತ್ಯವಾಗುತ್ತದೆ ಅಂತಾ ಅಂದುಕೊಂಡಿದ್ದೇನೆ, ಮೈತ್ರಿ ಸರ್ಕಾರದಲ್ಲಿ ಯಾವುದೇ ಒಡಕು ಬರದ ಹಾಗೆ ನಾವು ನೋಡಿಕೊಳ್ಳುತ್ತೇವೆ, ಇದ್ರಲ್ಲಿ ಎರಡು ಪಕ್ಷಗಳು ಜವಾಬ್ದಾರಿ ಹಿಂದ ನಡೆದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.
ಇನ್ನು ಇದೇ ವೇಳೆ ಬಿಬಿಎಂಪಿ ಮೈತ್ರಿ ಕುರಿತು ಮಾತಾನಾಡಿದ ಅವರು ನಾಳೆಯೇ ಮೈತ್ರಿ ಮುರಿದು ಬಿಳುತ್ತೇ ಎಂಬ ಮಾತುಗಳು ಕೇಳಿಬರ್ತಿದೆ, ಆದ್ರೆ ಆ ರೀತಿ ಅವಕಾಶ ಇಲ್ಲ. ನಾನು ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ, ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ ಎಂದರು.
ಇನ್ನು ಇದೇ ವೇಳೆ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರ ಮಾತಾನಾಡಿದ ಅವರು ಕೋರ್ಟ್ ಆದೇಶಕ್ಕೆ ಸ್ವಾಗತ ಕೋರುತ್ತೇನೆ, ಎಲ್ಲಾ ಮಹಿಳೆಯರು ಹೋಗುತ್ತಾರೆ ಎನ್ನಲಾಗುವುದಿಲ್ಲ, ಯಾರಿಗೆ ನಿಷ್ಟೆ ಇದೆಯೋ ಅವರೂ ಹೋಗ್ತಾರೆ. ಯಾರಿಗೆ ದರ್ಶನ ಮಾಡಬೇಕು ಅಂತಾ ಇಷ್ಟ ಇದೆಯೋ ಅಂತವರಿಗೆ ನಾವು ನಿರ್ಬಂಧಿಸಲು ಸಾಧ್ಯವಿಲ್ಲ ಎಂದರು.