Friday, January 24, 2025
ಸುದ್ದಿ

ಗಿಡಗಳ ಆರೈಕೆ ಮಾಡುತ್ತಿದ್ದ ಕಾರ್ಮಿಕರಿಗೆ ಮಿನಿ ಟೆಂಪೋ ಢಿಕ್ಕಿ – ಕಹಳೆ ನ್ಯೂಸ್

ಹೆದ್ದಾರಿಯಲ್ಲಿ ಗಿಡಗಳ ಆರೈಕೆ ಮಾಡುತ್ತಿದ್ದ ಕಾರ್ಮಿಕರಿಗೆ ಮಿನಿ ಟೆಂಪೋ ಢಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಉಡುಪಿಯ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಟಪಾಡಿಯರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕಾರ್ಮಿಕರಾದ ಶಿಲ್ಪಾ (35), ಮಲ್ಲಪ್ಪ (42) ಮತ್ತು ರೇಣುಕಾ (34) ಮತ್ತು ಟೆಂಪೋ ಚಾಲಕ ಚರಣ್ ರಾಜ್ ಗಾಯಗೊಂಡಿದ್ದು, ಗಾಯಾಳುಗಳ ಪೈಕಿ ಶಿಲ್ಪಾ ಹಾಗೂ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಕಾರ್ಮಿಕರು ಹೆದ್ದಾರಿಯ ಡಿವೈಡರ್ ನಡುವಿನ ಗಿಡಗಳ ಆರೈಕೆ ಕೆಲಸ ಮಾಡುತ್ತಿದ್ದಾಗ ರಕ್ಷಣೆಗಾಗಿ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಟೆಂಪೋ, ಬಳಿಕ ನಿಯಂತ್ರಣ ತಪ್ಪಿ ಕಾರ್ಮಿಕರಿಗೆ ಢಿಕ್ಕಿಯಾಗಿ, ಬಳಿಕ ಟ್ಯಾಕ್ಟರ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಟೆಂಪೋದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಾಳುಗಳನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಪು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ..