Thursday, January 23, 2025
ಸುದ್ದಿ

ಜುಲೈ 23ರಂದು ಪುತ್ತೂರಿನ ಎಂ.ಸುoದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ‘ತುಳುನಾಡ ಬಂಟರ ಪರ್ಬ 2023’ : – ಕಹಳೆ ನ್ಯೂಸ್

ತುಳುನಾಡ ಬಂಟರ ಪರ್ಬ 2023 ಕಾರ್ಯಕ್ರಮವು ಇದೇ ಜುಲೈ 23ರಂದು ಪುತ್ತೂರಿನ ಎಂ ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ, ಬಂಟರ ಸಂಘ ಪುತ್ತೂರು ತಾಲೂಕು, ಮಹಿಳಾ ಬಂಟರ ಸಂಘ ಪುತ್ತೂರು ತಾಲೂಕು ಮತ್ತು ವಿದ್ಯಾರ್ಥಿ ಬಂಟರ ಸಂಘದ ಪುತ್ತೂರು ತಾಲೂಕು ಇದರ ಸಹಕಾರದೊಂದಿಗೆ, ಯುವ ಬಂಟರ ಸಂಘ ಪುತ್ತೂರು ತಾಲೂಕು ಯುವ ಬಂಟದ ದಿನಾಚರಣೆ ಪ್ರಯುಕ್ತ, ತುಳುನಾಡ ‘ಬಂಟರ ಪರ್ಬ 2023’ ಕಾರ್ಯಕ್ರಮವು ಜುಲೈ 23ರಂದು ಪುತ್ತೂರಿನ ಎಂ ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ.

ತುಳುನಾಡ ಬಂಟೆರೆ ಪರ್ಬ 2023 ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ದಕ್ಷಿಣ ಕನ್ನಡ, ಕಾಸರಗೋಡು ಉಡುಪಿ ಜಿಲ್ಲಾ ವ್ಯಾಪ್ತಿಯ ಆಯ್ದ ಎಂಟು ಬಂಟ ಕಲಾ ತಂಡಗಳಿಂದ ತುಳುನಾಡು, ಬಂಟ ಸಂಸ್ಕೃತಿಗಳನ್ನ ಬಿಂಬಿಸುವ ಸ್ಪರ್ದೆಗೆ ಮಾತ್ರ ಅವಕಾಶವನ್ನ ನೀಡಲಾಗಿದೆ.

ಇನ್ನು ಬಂಟ ಸಮುದಾಯದ ಹಿರಿಯ ಚೇತನಗಳನ್ನ ಸ್ಮರಿಸುವ ಬಂಟ ಸ್ಮೃತಿ ನಡೆಯಲಿದ್ದು, 3 ಜನ ಬಂಟ ಹಿರಿಯರನ್ನ ಸ್ಮರಿಸಲಾಗುತ್ತದೆ. ಪುತ್ತೂರಿನ ನಿವೃತ್ತ ತಹಾಶೀಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈ, ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮುಂಡಾಳುಗುತ್ತು ತಿಮ್ಮಪ್ಪ ರೈ, ಜಯ ಕರ್ನಾಟಕ ಸಂಸ್ಧಾಪಕರಾದ ಎನ್.ಮುತ್ತಪ್ಪ ರೈ ಇವರನ್ನ ಸ್ಮರಿಸುವ ಕಾರ್ಯ ನಡೆಯಲಿದೆ.

ಯುವ ಬಂಟರ ದಿನಾಚರಣೆಯ ಉದ್ಘಾಟನೆಯನ್ನ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಇವರು ನೆರವೇರಿಸಲಿದ್ದಾರೆ. ಘನ ಉಪಸ್ಧಿತಿಯನ್ನ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸಲಿದ್ದಾರೆ. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರುಗಳು ಗೌರವ ಉಪಸ್ಧಿತಿವಹಿಸಲಿದ್ದಾರೆ. ಜೊತೆಗೆ ಹಲವು ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ರು.
ಹಲವು ಸಾಂಸ್ಕೃತಿಕಾ ಕಾರ್ಯಕ್ರಮಗಳು ನಡೆಯಲಿದೆ. ಸಿನೆಮಾ ರಂಗದ ಕಲಾವಿದರು ನಟ ನಟಿಯರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತುಂಬಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಯುವ ಬಂಟರ ಸಂಘದ ಪಾದಾಧಿಕಾರಿ ರಂಜಿನಿ ಶೆಟ್ಟಿ, ಯುವ ಬಂಟರ ಸಂಘದ ಕೋಶಾಧಿಕಾರಿ ಅಶೋಕ್ ಶೆಟ್ಟಿ, ತುಳುನಾಡ ಬಂಟರ ಪರ್ಬ 2023ರ ಸಂಚಾಲಕರಾದ ಹರ್ಷ ಕುಮಾರ್ ಮಾಡಾವು, ಭಾಗ್ಯೇಶ್ ರೈ ಕೆಯ್ಯೂರು ಉಪಸ್ಥಿತರಿದ್ದರು.