Thursday, January 23, 2025
ಕ್ರೈಮ್ಪುತ್ತೂರುಸುದ್ದಿ

ಸುಮಾರು 8 ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣ ಆರೋಪಿ ದೋಷಮುಕ್ತ – ಕಹಳೆ ನ್ಯೂಸ್ 

ಪುತ್ತೂರು ತಾಲೂಕು ಉದನೆ ಗ್ರಾಮದ ಉದನೆ ಪೇಟೆ ಎಂಬಲ್ಲಿ  ನ. 1 2015 ರಂದು  ಗುಂಡ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆರೋಪಿತ ಚಾಲಕ ಯಲ್ಲಪ್ಪ ದಳವಾಯಿ ತನ್ನ ಕೆಎಸ್ಆರ್ಟಿಸಿ ಬಸ್ಸನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಎದುರುಗಡೆಯಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಸುಬ್ರಮಣ್ಯ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಓಮಿನಿ ಕಾರು ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಪ್ರಯಾಣಿಕರೊಬ್ಬರಿಗೆ ತೀವ್ರತರವಾದ ರಕ್ತ ಗಾಯ ಉಂಟಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು ಅಪಘಾತಕ್ಕೆ ಸಂಬಂಧಿಸಿದಂತೆ ಕೆ. ಎಸ್. ಆರ್. ಟಿ. ಸಿ ಬಸ್ಸಿನ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷತನದ ಚಾಲನೆಯೇ ಕಾರಣ ಎಂದು ಆರೋಪಿಸಿ ದೂರುದಾರ ರವಿ ಎಂಬುವವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ. 253/2015 ರಂತೆ ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು, ಮಾನ್ಯ ತನಿಖಾಧಿಕಾರಿಯವರು ಸದರಿ ಪ್ರಕರಣದ ಕುರಿತು ತನಿಖೆ ನಡೆಸಿ ಚಾರ್ಜ್ ಶೀಟನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಸರಕಾರಿ ಅಭಿ ಯೋಜನೆ ಪರವಾಗಿ ಸುಮಾರು 21 ಸಾಕ್ಷಿಗಳ ಪೈಕಿ 13 ಮಂದಿಯನ್ನು ವಿಚಾರಣೆ ನಡೆಸಿ ಸುಮಾರು 21 ದಾಖಲೆಗಳನ್ನು ತಮ್ಮ ಪರವಾಗಿ ಗುರುತಿಸಿದ್ದು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದ ಮುಂದೆ ಅಭಿಯೋಜನ ಪರವಾದ ಹಾಗೂ ಆರೋಪಿಯ ಪರವಾಗಿ ಖ್ಯಾತ ನ್ಯಾಯವಾದಿಗಳು ಕಜೆಲಾ ಚೇಂಬರ್ಸ್ ನ ಮುಖ್ಯಸ್ಥರು ಆದ ಶ್ರೀ ಮಹೇಶ್ ಕಜೆ ರವರ ವಾದವನ್ನು ಆಲಿಸಿದ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ಪುತ್ತೂರು ದ ಕ ನ್ಯಾಯಾಧೀಶರಾದ ಶ್ರೀ ಶಿವಣ್ಣ ಎಚ್ ಆರ್ ರವರು ಸದ್ರಿ ವಾದ ವಿವಾದವನ್ನು ಪರಿಗಣಿಸಿ ದಿನಾಂಕ 15.07.2023 ರಂದು ಆರೋಪಿಯಾದ ಯಲ್ಲಪ್ಪ ದಳವಾಯಿ ಯವರನ್ನು ಸದ್ರಿ ಪ್ರಕರಣದಿಂದ ದೋಷ ಮುಕ್ತನೆಂದು ಆದೇಶವನ್ನು ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು