Thursday, January 23, 2025
ಸುದ್ದಿ

ಮಾದಕ ವಸ್ತು ಮಿಶ್ರಿತ ಚಾಕೋಲೆಟ್ ಮಾರಾಟ – 100 ಕೆ.ಜಿ. ಚಾಕೋಲೆಟ್ ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು: ಮಾದಕ ವಸ್ತು ಮಿಶ್ರಿತ ಚಾಕೊಲೆಟ್ ಮಾರಾಟ ಮಾಡುತ್ತಿದ್ದ ಸುಮಾರು 100 ಕೆಜಿಯಷ್ಟು ಚಾಕೊಲೇಟ್ ಗಳನ್ನು ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಹಾಗೂ ನಗರದ ಫಳ್ನೀರ್ ನ ಗೂಡಂಗಡಿ ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತ ಮಾದಕ ವಸ್ತು ಮಿಶ್ರಿತ ಚಾಕೊಲೆಟ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿ ಒಟ್ಟು ಸುಮಾರು 100 ಕೆ.ಜಿ. ಚಾಕೋಲೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಶಕ್ಕೆ ಪಡೆದ ಚಾಕೊಲೆಟ್ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿ ಆಧಾರದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು