Thursday, January 23, 2025
ಉಡುಪಿಸುದ್ದಿ

ವಾರೀಸುದಾರರಿಲ್ಲದ ಶವಗಳ ಅಂತ್ಯ ಸಂಸ್ಕಾರ ಮಾಡಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು – ಕಹಳೆ ನ್ಯೂಸ್

ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪಿದ ಮುಕೇಶ್ 45 ವರ್ಷ, ನಾಗರಾಜ 33 ವರ್ಷ ಪ್ರಾಯದ ಅನಾಥ ಶವವನ್ನು ಹಾಗೂ ಹೊಸಬೆಳಕು ಆಶ್ರಮದಲ್ಲಿ ಸಾವನ್ನಪ್ಪಿದ 45 ವರ್ಷ ಪ್ರಾಯದ ಬಸವರಾಜು ಎನ್ನುವ ಮೂವರ ಅಂತ್ಯ ಕ್ರಿಯೆಯನ್ನು ಇಂದು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನೇರವೇರಿಸಲಾಯಿತು.

ಮೃತರ ವಾರೀಸುದಾರರ ಪತ್ತೆಗೆ ಮಾಧ್ಯಮ ಪ್ರಕಟಣೆ ನೀಡಲಾಗಿದ್ದು, ಕಾಯುವಿಕೆಯ ಕಾಲಮಿತಿ ಕಳೆದರೂ ವರೀಸುದಾರರು ಸಂಪರ್ಕಿಸದೆ ಇರುವುದರಿಂದ ಕಾನೂನು ಪ್ರಕ್ರಿಯೆ ನಡೆದ ಬಳಿಕ ಗೌರಯುತವಾಗಿ ದಫನ್ ಮಾಡಲಾಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು, ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ವಿನಯಚಂದ್ರ, ತನುಲಾ ತರುಣ್, ಪ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ, ಪ್ರದೀಪ್, ಸಾಜಿ ಕುಮಾರ್ ಹಾಗೂ ನಗರ ಸಭೆ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು