Friday, January 24, 2025
ಸುದ್ದಿ

ಬಿಸಿರೋಡಿನ ಪೇಟೆಗೆ ತಾಗಿಕೊಂಡ ಮನೆಯ ಮುಂಭಾಗದಲ್ಲಿ ಕಂಡುಬoತು ಅಪರೂಪದ ದೃಶ್ಯ – ಕಹಳೆ ನ್ಯೂಸ್

ಬಿಸಿರೋಡಿನ ಕುಲಾಲ ಭವನದ ಸಮೀಪದ ಅರ್ಕಮೆ ಮನೆಯ ಮುಂದೆ 96ವರ್ಷದ ಅಜ್ಜಿಯೋರ್ವರು ತೆಂಗಿನ ಗರಿಯ ಮೂಲಕ ಹಿಡಿಸೂಡಿ ತಯಾರಿಕೆಯಲ್ಲಿ ತೊಡಗಿದ್ದರು. ಕಮಲಾ ಯು.ಉಮನಾಥ ಸಾಲಿಯಾನ್ ಅಜ್ಜಿ ಜೊತೆ ಮಾತನಾಡಿದಾಗ ಅವರು ಹೇಳಿದ್ದೇನು ಗೊತ್ತಾ?

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯಲ್ಲಿ ಸುಮ್ಮನೆ ಕೂತು ಕೂತು ಬೇಜಾರು ಆಗುವುದು ಬೇಡ ಅನ್ನುವುದಕ್ಕೆ ಹಿಡಿಸೂಡಿ ಮಾಡುತ್ತಿದ್ದೇನೆ. ಇಂದಿನ ಯುವ ಸಮುದಾಯಕ್ಕೆ ಇದರ ಬೆಲೆ ಬಗ್ಗೆ ಏನು ಗೊತ್ತಿದೆ, ಅಂಗಡಿಯಲ್ಲಿ ಪ್ಲಾಸ್ಟಿಕ್ ಹಿಡಿಸೂಡಿಗಳು ಸಿಗುತ್ತದೆ ಅದನ್ನು ಕೊಂಡುಹೋಗುತ್ತಾರೆ, ಆದರೆ ಉಚಿತವಾಗಿ ನಮ್ಮ ಮನೆಯಲ್ಲಿ ತಯಾರಿಸಬಹುದಾದ ಸಣ್ಣ ಕೆಲಸ ಮಾಡುದಿಲ್ಲ. ಅಂಗಡಿಯಲ್ಲಿ ಅಪರೂಪಕ್ಕೊಂದು ನಮ್ಮಂತಹ ಹಿರಿಯರು ಮಾಡಿ ಕೊಡುವ ತೆಂಗಿನಗರಿಯ ಹಿಡಿಸೂಡಿಯನ್ನು ಕೊಂಡುಹೋಗುತ್ತಾರೆ,ಇಲ್ಲವೇ ಪ್ಲಾಸ್ಟಿಕ್ ಹಿಡಿಸೂಡಿ ಕೊಂಡುಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಂತ್ರಜ್ಞಾನದ ವೇಗದ ಜೊತೆ ಜೀವನದಲ್ಲಿ ಗ್ರಾಮೀಣ ಬದುಕು, ಗ್ರಾಮೀಣ ವಸ್ತುಗಳು ಗ್ರಾಮೀಣ ಭಾಗದ ಕರಕುಶಲ ವಸ್ತುಗಳು ಹೀಗೆ ಮನೆಉಪಯೋಗದ ಪಕೃತಿಯ ಮಡಿಲಲ್ಲಿ ಸಿಗುವ ಅಮೂಲ್ಯ ವಸ್ತುಗಳು ಮಾಯವಾಗಿದೆ, ಇದ್ದರೂ ಕೂಡ ಅದರ ಸದ್ಬಳಕೆ ಮಾಡುವುದು ನಮಗೆ ತಿಳಿದಿಲ್ಲ.ಹಾಗಾಗಿ ಅನೇಕ ಬಹುಅಮೂಲ್ಯವಾದ ವಸ್ತುಗಳನ್ನು ಕಳೆದುಕೊಂಡು ಪ್ಲಾಸ್ಟಿಕ್ ಹಾವಳಿಯ ನಡುವೆ ನಾವಿದ್ದೇವೆ.ಹಾಗಾಗಿ ಅನೇಕ ಮಾರಕ ರೋಗಗಳಿಗೂ ತುತ್ತಾಗಿದ್ದೇವೆ ಎಂಬುದು ಕೂಡ ಅಷ್ಟೇ ಸತ್ಯ.
ಕಮಲಾ ಅವರು ಬಿಸಿರೋಡಿನ ಸಿಟಿ ಮಧ್ಯೆ ಇದ್ದರೂ ಕೂಡ ಕೃಷಿ ಕುಟುಂಬಕ್ಕೆ ಸೇರಿದ ಮಹಿಳೆ ಹಾಗಾಗಿ 96 ರ ಹರೆಯದಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದಾರೆ.