ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ರಂಗ ಸಂಗಮದಲ್ಲಿ ಆರು ನಾಟಕಗಳ ಯಶಸ್ವಿ ಪ್ರದರ್ಶನ –ಕಹಳೆ ನ್ಯೂಸ್
ಉಡುಪಿ : ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ವಾರ್ಷಿಕೋತ್ಸವ ರಂಗ ಸಂಗಮ ದಲ್ಲಿ ನಡೆದ ಆರು ನಾಟಕಗಳ ಆಯ್ದ ಭಾಗಗಳ ರಂಗ ದೃಶ್ಯಾವಳಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಎರಡು ಪಾಶ್ಚಾತ್ಯ ಒಂದು ಮಲೆಯಾಳಂ ಹಾಗೂ ಮೂರು ತುಳುನಾಟಕಗಳ ಆಯ್ದ ಭಾಗಗಳನ್ನು ಉಡುಪಿ ಜಿಲ್ಲೆಯ ವಿವಿಧ ತಂಡಗಳ ಕಲಾವಿದರು ಅಭಿನಯಿಸಿ ಪ್ರದರ್ಶಿಸಿದರು.
ವಿಲಿಯಂ ಶೇಕ್ಸ್ಪಿಯರ್ ಬರೆದ “ಮ್ಯಾಕ್ ಬೆತ್” ನಾಟಕದಲ್ಲಿ ಪೂಜಾ ಪೂಜಾರಿ, ಪ್ರಥಮ್ ಶೆಟ್ಟಿ, ಶಶಿರಾಜ್ ಆಚಾರ್ಯ, ದಿನೇಶ್ ಅಮೀನ್ ಹಾಗೂ ಸತೀಶ್ ಕಲ್ಯಾಣಪುರ ಜಿ ಶಂಕರ್ ಪಿಳ್ಳೆ ಬರೆದ “ಭರತವಾಕ್ಯಂ” ನಾಟಕದಲ್ಲಿ ಸುಜಿತ್ ಶೆಟ್ಟಿ ಕಾಪು, ಪ್ರಭಾಕರ್ ಕಲ್ಯಾಣಿ, ಸಾಗರ್ , ರಾಜೇಶ್ ಪಡುಬಿದ್ರಿ ಅಭಿನಯಿಸಿದ್ದು, ಯು ಆರ್ ಚಂದರ್ ಬರೆದ “ಕೋರ್ದಬ್ಬು ತನ್ನಿಮಾನಿಗ” ನಾಟಕದಲ್ಲಿ ಕಲ್ಮಾಡಿ, ನಾಗರಾಜ್ ಉಪ್ಪೂರು, ರಾಜಾ ಕಟಪಾಡಿ, ಶಶಿಕಾಂತ್, ಪ್ರವೀಣ್ ಹೆಗ್ಡೆ, ಜಯಕರ್ ಅಭಿನಯಿಸಿದರು.
“ಚೆಕಾವ್” ಕಥಾಧಾರಿತ ನಾಟಕದಲ್ಲಿ ಪ್ರವೀಣ್ ಕೊಡಕ್ಕಲ್ , ಯಶವಂತ್ ಉಪ್ಪೂರು, ಪ್ರಜ್ಞಾ ಕುರ್ಕಾಲು ಹಾಗೂ ಅಮೃತ ಸೋಮೇಸ್ವರ ಬರೆದ “ಗೋಂದೊಲು” ನಾಟಕದಲ್ಲಿ ಪ್ರಭಾಕರ್ ಆಚಾರ್ಯ, ಭವ್ಯ ಪ್ರಭು, ಮನೋಜ್, ಪೂಜಾ ಪೂಜಾರಿ ಹಾಗೂ ಡಾ ಸಂಜೀವ ದಂಡಕೇರಿಯವರ “ಬಯ್ಯಮಲ್ಲಿಗೆ” ನಾಟಕದಲ್ಲಿ ಪೂಜ ಪೂಜಾರಿ, ಕುಸುಮಾ ಕಾಮತ್,ಆನಂದ ಎಲ್ಲೂರು, ರಾಜೇಶ್ ಪಡುಬಿದ್ರಿ, ರಮೇಶ್ ಆಚಾರ್ಯ, ಗಣೇಶ್ ಕುಲಾಲ್ ಅಭಿನಯಿಸಿದರು.
ಸಂಗೀತ ಸಾಂಗತ್ಯ; ಶೋಧನ್ ಎರ್ಮಾಳ್, ಮೇಘನಾ ಕುಂದಾಪುರ, ಶರತ್ ಉಚ್ಚಿಲ, ಸುಜಾತಾ ಪ್ರಭಾಕರ ಆಚಾರ್ಯ
ರಂಗ ಸಜ್ಜಿಕೆ : ಸುದೀಶ್ ,ಮಣಿ ಎನ್, ಪ್ರಸಾದನ: ಪಾಂಡು ಪರ್ಕಳ,ಶಿವರಾಮ ಕಲ್ಮಡ್ಕ
ಬೆಳಕು: ಹಾಗೂ ಅಭಿನಯಾ ಉಡುಪಿ ಸಂದೀಪ್ , ಪ್ರದೀಪ್,ರಾಘು
ನಿರೂಪಣೆ; ಸಂದೀಪ್ ಶೆಟ್ಟಿ ಮಾಣಿಬೆಟ್ಟು, ನಾಗರಾಜ್ ವರ್ಕಾಡಿ, ನಿರ್ವಹಿಸಿದರು.
ಈ ವಿಶಿಷ್ಟ ರಂಗ ದೃಶ್ಯಾವಳಿಯ ಪರಿಕಲ್ಪನೆ ಮತ್ತು ನಿರ್ದೇಶನ ವಿದ್ದು ಉಚ್ಚಿಲ್. ಈ ರಂಗ ದೃಶ್ಯಾವಳಿ ಪ್ರಸ್ತುತಿಯ. ಬಳಿಕ ಹೊಸದೊಂದು ರಂಗ ಪ್ರಯೋಗದ ಸಾಧ್ಯತೆಯನ್ನು ರಂಗ ಸಂಗಮ ತೆರೆದಿಟ್ಟಿತು.