ರಾಜ್ಯ ಬಜೆಟ್‍ನಲ್ಲಿ ಮದ್ಯದ ದರ ಪರಿಷ್ಕರಣೆ : ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟು ಏರಿಕೆ – ಕಹಳೆ ನ್ಯೂಸ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ಘೋಷಿಸಿದ ಪ್ರಕಾರ, ಮದ್ಯದ ಬೆಲೆ ಇಂದಿನಿಂದ ಅನ್ವಯವಾಗುವಂತೆ ಹೆಚ್ಚಳವಾಗಿದೆ. ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.
ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ, ಇನ್ನು ಜಾರಿಗೆ ತರಬೇಕಾದ ವಿವಿಧ ಯೋಜನೆಗಳ, ಗ್ಯಾರೆಂಟಿ ಯೋಜನೆಗಳಿಗೆ ಸಂಪನ್ಮೂಕ ಕ್ರೋಢೀಕರಣ ದೃಷ್ಟಿಯಿಂದ ಮದ್ಯದ ಬೆಲೆಯನ್ನು ಹೆಚ್ಚಿಸಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳ ರಿಟೇಲ್ ಮದ್ಯ ಮಾರಾಟದ ಬಾರ್ ಆ್ಯಂಡ್ ರೆಸ್ಟೊರೆಂಟ್‍ಗಳಲ್ಲಿ ಗುರುವಾರ ರಾತ್ರಿಯೇ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡಿದ ಪ್ರಕರಣಗಳೂ ವರದಿಯಾಗಿವೆ.
ಸರ್ಕಾರ ಬಜೆಟ್‍ನಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯಗಳ ಸುಂಕವನ್ನು ಶೇ.20ರಷ್ಟುಏರಿಕೆ ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಿಸಿದ್ದನ್ನು ತಿಳಿಸಿತ್ತು. ಹೀಗಾಗಿ ಹಾಲಿ ದರಕ್ಕೆ ಹೋಲಿಸಿದಾಗ ಶೇ.10ರಷ್ಟು ಬಿಯರ್ ದರ ಹೆಚ್ಚಳವಾಗಲಿದೆ. ಐಎಂಎಲ್ ಒಂದು ಪೆಗ್ (60 ಎಂಎಲ್) ಗೆ .10-20 ಹೆಚ್ಚಳವಾಗುವ ಸಾಧ್ಯತೆಯಿದೆ.
ಒಟ್ಟಾರೆ 18 ಸ್ತರದಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ. ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ .450 ತನಕ ಇದ್ದರೆ ಅದರ ಅಬಕಾರಿ ಸುಂಕ .215 ರೂ ಆಗಲಿದೆ. ಇದೇ ರೀತಿ, 450ರಿಂದ 499 ರೂ.ತನಕದ ಮೌಲ್ಯದ ಪೆಟ್ಟಿಗೆ ಮೇಲಿನ ಅಬಕಾರಿ ಸುಂಕ 294 ರೂಪಾಯಿ ಆಗಲಿದೆ. ಅದೇ ರೀತಿ 500 ರೂಪಾಯಿಯಿಂದ 549 ರೂಪಾಯಿ ತನಕದ ಪೆಟ್ಟಿಗೆಯ ಸುಂಕ 386 ರೂ. ಆಗಲಿದೆ. ಈ ರೀತಿ, 18 ಸ್ತರದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದೆ. ಇದರಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಇತರ ಮದ್ಯಗಳು ಮಾತ್ರ ಒಳಗೊಂಡಿವೆ.
ಬಿಯರ್ ದರವನ್ನೂ ಸರ್ಕಾರ ಇಂದಿನಿಂದ ಅನ್ವಯವಾಗುವಂತೆ ಹೆಚ್ಚಿಸಿದೆ. ಬಜೆಟ್‍ನಲ್ಲಿ ಘೋಷಿಸಿದ ಪ್ರಕಾರ ಅಬಕಾರಿ ಸುಂಕ ಶೇಕಡ 185 ಏರಿಕೆಯಾಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ, ಘೋಷಿತ ದರದ ಶೇಕಡ 185 ಅಬಕಾರಿ ಸುಂಕ ಇರಲಿದೆ