Thursday, January 23, 2025
ಸುದ್ದಿ

ಉಡುಪಿಯ ಯೋಗಬಾಲೆಯ 9 ನೇ ಗಿನ್ನಿಸ್ ದಾಖಲೆಯ ಪ್ರಯತ್ನ – ಕಹಳೆ ನ್ಯೂಸ್

ಉಡುಪಿ : ಯೋಗಬಾಲೆ ತನುಶ್ರೀ ಪಿತ್ರೋಡಿ 9ನೇ ಗಿನ್ನೆಸ್ ದಾಖಲೆಗೆ ಪ್ರಯತ್ನಿಸಿದ್ದಾಳೆ. ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯ ಸಭಾಂಗಣದಲ್ಲಿ ತನ್ನ ಸಹಪಾಠಿಗಳ ಮತ್ತು ಗುರುಗಳ ಸಮ್ಮುಖದಲ್ಲಿ ಈ ಗಿನ್ನೆಸ್ ದಾಖಲೆಯ ಪ್ರಯತ್ನ ಯಶಸ್ವಿಯಾಗಿ ಸಂಪನ್ನಗೊoಡಿತು.


ತನುಶ್ರೀ ಇದುವರೆಗೆ ಒಟ್ಟು ಎಂಟು ವಿಶ್ವದಾಖಲೆಯನ್ನು ಮಾಡಿದ್ದು ಇದು ಒಂಭತ್ತನೇ ವಿಶ್ವದಾಖಲೆಯ ಪ್ರಯತ್ನವಾಗಿದೆ. ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನು ಚಲಿಸಿ ಎರಡೂ ಕಾಲುಗಳನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಕೈ ಯ ಚಲನೆ ಮಾಡುವ ಭಂಗಿ ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್ ಇದನ್ನು ಆಕೆ ಒಂದು ನಿಮಿಷದಲ್ಲಿ 53 ಬಾರಿ ಮಾಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದಿನ ದಾಖಲೆ ಒಂದು ನಿಮಿಷದಲ್ಲಿ 48 ಬಾರಿ ಇದ್ದು ತನುಶ್ರೀ ಆ ದಾಖಲೆಯನ್ನು ಮುರಿದಿದ್ದಾಳೆ. ಇನ್ನು ಗಿನ್ನೆಸ್ ದಾಖಲೆಯ ಸಂಸ್ಥೆ ಅದನ್ನು ಪರಿಶೀಲಿಸಿ ಬಳಿಕ ಅರ್ಹತಾ ಪತ್ರ ನೀಡಲಿದೆ. ಈ ಸಂದರ್ಭದಲ್ಲಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯ ವಿಭಾ ಸಿಸ್ಟರ್, ಪ್ರೀತಿ ಕ್ರಾಸ್ತಾ, ನಾಟ್ಯ ಗುರು ರಾಮಕೃಷ್ಣ ಕೊಡಂಚ, ಇಂದ್ರಾಳಿ ಜಯಕರ್ ಶೆಟ್ಟಿ, ನಗರಸಭಾ ಸದಸ್ಯೆ ಲಕ್ಷ್ಮೀ ಭಟ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು