Thursday, January 23, 2025
ಸುದ್ದಿ

ಎಸ್ ಡಿ ಯಂ ಕಬಡ್ಡಿ ತಾರೆ ಗಗನ್ ಗೌಡ,ಪ್ರೊ ಕಬಡ್ಡಿ 10 ನೇ ಆವೃತ್ತಿ ಗೆ ಆಯ್ಕೆ – ಕಹಳೆ ನ್ಯೂಸ್

ಕ್ರೀಡಾ ಲೋಕದ ದೊಡ್ಡ ಸಮುದ್ರ ಎಂದು ಹೆಸರುವಾಸಿಯಾಗಿರುವ ಎಸ್ ಡಿ ಯಂ ಉಜಿರೆ ವಿದ್ಯಾಸಂಸ್ಥೆಯ ಕಬಡ್ಡಿ ಆಟಗಾರ ಗಗನ್ ಗೌಡ ಮುಂದೆ ಬರಲಿರುವ ಪ್ರೊ ಕಬಡ್ಡಿ ಹತ್ತನೇ ಆವೃತಿಯಲ್ಲಿ ಯುಪಿ ಯೋಧ ತಂಡದ ಪರವಾಗಿ ಆಡಲಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನವರಾಗಿದ್ದು, ದೈಹಿಕ ಶಿಕ್ಷಕ ಕೃಷ್ಣಾನಂದ ರಾವ್ ಅವರ ಗರಡಿಯಲ್ಲಿ ಪಲಗಿ ಮೊನ್ನೆ ತಾನೇ ಮೈಸೂರಿನಲ್ಲಿ ನಡೆದ ಯುವ ಕಬ್ಬಡಿ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ನೇರವಾಗಿ ಪ್ರೊ ಕಬಡ್ಡಿ ಹತ್ತನೇ ಆವೃತ್ತಿಯಲ್ಲಿ ಯುಪಿ ಯೋಧ ತಂಡದ ಪಾಲಾಗಿದ್ದಾರೆ.ಇದರೊಂದಿಗೆ ಪ್ರೊ ಕಬಡ್ಡಿ ಹತ್ತನೇ ಆವೃತ್ತಿಗೆ ಯು ಪಿ ಯೋಧ ತಂಡದ ಪಾಲದ ಮೊದಲ ಆಟಗಾರ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ಇವರು ಶ್ರೀ ರಾಜು ಹೆಚ್‌ಎಸ್ ಹಾಗೂ ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು