Thursday, January 23, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಅಜಿಪ್ಪಡ್ ಉಂಡಾ…!?? ಸರಿಟ್ ಉಂಡಾ..!! ಅಣ್ಣಾ… ಬಲಿಪ್ಪುಲೆ ಪೋಲಿಸ್ ಬತ್ತಂಡ್…!!! ಪೆರುವಾಯಿ ಕೊಲ್ಲತಡ್ಕದಲ್ಲಿ ರಾಜಾರೋಶವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವಿಟ್ಲ ಪೋಲೀಸ್ ದಾಳಿ – ಕಹಳೆ ನ್ಯೂಸ್

ವಿಟ್ಲ: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಪೆರುವಾಯಿಯ ಕೊಲ್ಲತಡ್ಕದಲ್ಲಿ ನಡೆದಿದೆ.

ಪೆರುವಾಯಿಯಿಂದ ಮಾಣಿಲ ಕಡೆ ಹೋಗುವ ರಸ್ತೆಯ ಕೊಲ್ಲತಡ್ಕ ಎಂಬಲ್ಲಿ ಯಾವುದೇ ಕಾರಣವಿಲ್ಲದೇ ವ್ಯವಸ್ಥಿತ ರೀತಿಯಲ್ಲಿ ಮೂರು ದಿನದ ಕೋಳಿ ಅಂಕ ಏರ್ಪಡಿಸಲಾಗಿತ್ತು. ಶೀಟ್‌ ಹಾಕಿ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿ ಕೋಳಿ ಅಂಕ ಏರ್ಪಡಿಸಲಾಗಿದ್ದು, ಕೋಳಿ ಅಂಕದ ಆಮಂತ್ರಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಲೈಟ್‌ ಆಳವಡಿಸಿ ಹಗಲು-ರಾತ್ರಿ ನಡೆಯಬೇಕಿದ್ದ ಕೋಳಿ ಅಂಕಕ್ಕೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಕಾಲ್ಕಿತ್ತಿದ್ದಾರೆ.

ಸ್ಥಳೀಯ ಮುಖಂಡ ಒಬ್ಬನ ನೇತೃತ್ವದಲ್ಲಿ ಇದು ನಡೆದಿದೆ ಎಂದು ತಿಳಿದು ಬಂದಿದೆ.