Sunday, November 24, 2024
ಸುದ್ದಿ

ಭಾರೀ ಮಳೆಗೆ ನೇರಳಕಟ್ಟೆಯಲ್ಲಿ ರಸ್ತೆಗೆ ಉರುಳಿದ ಬೃಹತ್ ಗಾತ್ರದ ಮರ – ಟ್ರಾಫಿಕ್ ಜಾಮ್ – ಕಹಳೆ ನ್ಯೂಸ್

ಬಂಟ್ವಾಳ: ನಿನ್ನೆ ರಾತ್ರಿಯಿಂದಲೇ ಕರಾವಳಿಯಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಇನ್ನು ಇಂದು ಬೆಳಗ್ಗೆ ಸುರಿದ ಬಾರಿ ಗಾಳಿ ಮಳೆಗೆ ಮಾಣಿ ಪುತ್ತೂರು ಮಾರ್ಗದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳಕಟ್ಟೆ ಬಳಿ ಬೃಹತ್ ಮರವೊಂದು ಧರೆಗುರುಳಿದಿದೆ. ಮರವು ದಾರಿಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಳಿ ಮಳೆಗೆ ಮರದ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಘಟನೆಯಿಂದಾಗಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಲು ಸಾಲುಗಟ್ಟಿ ನಿಂತಿದೆ. ಕೆಲವೊಂದು ವಾಹನಗಳು ಕೊಡಾಜೆ ವೀರಕಂಬ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿದರೆ ಕೆಲವೊಂದು ವಾಹನಗಳು ಕಬಕ ವಿಟ್ಲ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿವೆ.
ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ, ವಿಟ್ಲ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿಕೊಂಡು ತೆರವು ಕರ‍್ಯಾಚರಣೆ ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು