Thursday, January 23, 2025
ಸುದ್ದಿ

ಫ್ರೀಫೈರ್ ಗೇಮ್ ನಲ್ಲಿ ಸೋಲಿಸಿದ ವಿಚಾರವಾಗಿ ಚೂರಿ ಇರಿದ ಪ್ರಕರಣ : ಆರೋಪಿಗೆ ಜಾಮೀನು ಆರೋಪಿ ಪರ ವಾದಿಸಿದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಮತ್ತು ಮಹೇಶ್ ಜೋಗಿ – ಕಹಳೆ ನ್ಯೂಸ್

ಪುತ್ತೂರು : ಫ್ರೀ ಫೈರ್ ಗೇಮ್‌ನಲ್ಲಿ ಸೋಲಿಸಿದ ವಿಚಾರದಲ್ಲಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಪ್ರತ್ಯುಷ್ ಸಾಲಿಯಾನ್ ಎಂಬವರು ಆರೋಪಿ ಸಂಜಯ್ ಪೂಜಾರಿ ಎಂಬವರನ್ನು ಮೊಬೈಲ್‌ನಲ್ಲಿ ಫ್ರೀ ಫೈರ್ ಆನ್‌ಲೈನ್‌ ಗೇಮ್‌ನಲ್ಲಿ ಸೋಲಿಸಿದ ವಿಚಾರದ ದ್ವೇಷದಲ್ಲಿ ಈ ಕೃತ್ಯ ಎಸಗಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತ್ಯುಷ್‌ ರವರು ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಜೆಪ್ಪು ಬಜಾಲ್ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಕುಳಿತಿದ್ದ ಆರೋಪಿ ಸಂಜಯ್ ಪೂಜಾರಿ ಪ್ರತ್ಯುಷ್‌ ರನ್ನು ತಡೆದು ನಿಲ್ಲಿಸಿ ಚೂರಿಯಿಂದ ತಿವಿದು ಗಾಯಗೊಳಿಸಿದ್ದರೆಂದು
ದೂರಿನಲ್ಲಿ ತಿಳಿಸಲಾಗಿತ್ತು. ಮೇ.17 ರಂದು ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಆರೋಪಿ ಪರ ವಕೀಲರಾದ ಮಹೇಶ್ ಕಜೆ ಮತ್ತು ಮಹೇಶ್ ಜೋಗಿ ಮಂಗಳೂರು ವಾದಿಸಿದ್ದರು.