Sunday, January 19, 2025
ಸುದ್ದಿ

ಸ್ಕೂಟಿಗೆ ಬಸ್ ಡಿಕ್ಕಿ- ಸವಾರ‌ ಮೃತ್ಯು, ಸಹಸವಾರನಿಗೆ‌ ಗಾಯ -ಕಹಳೆ ನ್ಯೂಸ್

ಹಿರಿಯಡ್ಕ : ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತ ಪಟ್ಟು, ಸಹಸವಾರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಓಂತಿಬೆಟ್ಟು ಬಳಿ ನಡೆದಿದೆ.

ಹಿರಿಯಡ್ಕದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್ ಓಂತಿಬೆಟ್ಟು ಕಲ್ಯಾಣ ಮಂಟಪದ ಬಳಿ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಸವಾರ ಕೃಷ್ಣ ಪೂಜಾರಿ(60)ಸ್ಥಳದಲ್ಲೇ ಮೃತಪಟ್ಟರೆ, ಸಹಸವಾರ ನಿವೃತ್ತ ಬ್ಯಾಂಕ್ ಉದ್ಯೋಗಿ ಬೋಜ ಶೆಟ್ಟಿ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಕೃಷ್ಣ ‌ಪೂಜಾರಿಯವರು ಮೇಸ್ತ್ರಿ ವೃತ್ತಿ ಮಾಡುತ್ತಿದ್ದು, ಓಂತಿಬೆಟ್ಟಿನಿಂದ ಹಿರಿಯಡ್ಕ ಕಡೆ ಸ್ಕೂಟಿಯಲ್ಲಿ ಹೋಗುತ್ತಿದ್ದರು‌ ಎಂದು ಪೊಲೀಸರು ತಿಳಿಸಿದ್ದಾರೆ.