Monday, November 25, 2024
ಸುದ್ದಿ

ದಂಪತಿಗೆ ‘ಅವಳಿ ಜವಳಿ’ ಮಕ್ಕಳ ಭಾಗ್ಯ ಕರುಣಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ – ಕಹಳೆ ನ್ಯೂಸ್

ಮಂಗಳೂರು ತಾಲೂಕಿನ ಚಿತ್ರಾಪುರ ಕುಲಾಯಿ ಪರಿಸರದ ಶ್ರೀ ವಿಶ್ವನಾಥ ಮತ್ತು ಸುಪ್ರಿಯಾ ಎಂಬುವವರು ಸುಮಾರು 6ವರ್ಷಗಳ ಹಿಂದೆ ಮದುವೆಯಾಗಿದ್ರೂ ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಗೆ ಬಂದು ಶ್ರೀದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮಗೆ ಒಂದು ವರ್ಷದ ಒಳಗಡೆ ಮಗುವಿನ ಭಾಗ್ಯ ಒದಗಿ ಬರುತ್ತದೆ ಎಂದು ತಾಯಿ ಅಭಯ ಕೊಟ್ಟಿದ್ದಾಳೆ. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ “ಅವಳಿ ಜವಳಿ “(1ಗಂಡು, 1ಹೆಣ್ಣು ) ಮಕ್ಕಳ ಭಾಗ್ಯ ಒದಗಿ ಬಂದಿದೆ. ಈ ಹಿನ್ನೆಲೆ ಅವರ ಜೀವನದ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿ ಚಾಮುಂಡೇಶ್ವರಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು