Thursday, January 23, 2025
ಸುದ್ದಿ

ತುಳುನಾಡ ಬಂಟರ ಪರ್ಬ 2023’ ಕಾರ್ಯಕ್ರಮಕ್ಕೆ ಸಜ್ಜಾದ ಪುತ್ತೂರಿನ ಎಂ ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ – ಕಹಳೆ ನ್ಯೂಸ್

ತುಳುನಾಡ ಬಂಟರ ಪರ್ಬ 2023 ಕಾರ್ಯಕ್ರಮಕ್ಕೆ, ಪುತ್ತೂರಿನ ಎಂ ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಸಜ್ಜಾಗಿದ್ದು, ಸಕಲ ಸಿದ್ದತೆ ಭರದಿಂದ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿಯ ಬಂಟರ ಪರ್ಬ 2023 ಕಾರ್ಯಕ್ರಮವು ಹಲವಾರು ವಿಶೇಷತೆಗಳೊಂದಿಗೆ ಮೂಡಿಬರಲಿದೆ. ಕಾರ್ಯಕ್ರಮದ ವೇದಿಕೆಯನ್ನ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ತುಳುನಾಡಿನ ಜಾನಪದ ಕಲೆಯನ್ನ ಬಿಂಬಿಸುವ ವಿಚಾರಗಳು ಈ ಬಾರಿಯ ಬಂಟೆರೆ ಪರ್ಬಕ್ಕೆ ವಿಶೇಷ ಮೆರುಗನ್ನ ತುಂಬಲಿದೆ.

ತುಳುನಾಡ ಬಂಟೆರೆ ಪರ್ಬ 2023 ಸಾಂಸ್ಕೃತಿಕ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು, ಇದರಲ್ಲಿ ಡಾನ್ಸ್, ಫ್ಯಾಶನ್ ಶೋ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಕಲಾವಿದರಿಂದ ರಿಹರ್ಸಲ್ ನಡೆದಿದೆ. ದಕ್ಷಿಣ ಕನ್ನಡ, ಕಾಸರಗೋಡು ಉಡುಪಿ ಜಿಲ್ಲಾ ವ್ಯಾಪ್ತಿಯ ಆಯ್ದ ಎಂಟು ಬಂಟ ಕಲಾ ತಂಡಗಳಿoದ ತುಳುನಾಡು, ಬಂಟ ಸಂಸ್ಕೃತಿಗಳನ್ನ ಬಿಂಬಿಸುವ ಸ್ಪರ್ದೆ ನಾಳೆ ನಡೆಯಲಿದ್ದು ಎಲ್ಲರ ಗಮನ ಸೆಳೆಯಲಿದೆ.