Thursday, January 23, 2025
ಸುದ್ದಿ

ಧಾರಾಕಾರ ಮಳೆ : ಬಂಟ್ವಾಳದ ಹಲವೆಡೆ ಹಾನಿ -ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಹಲವೆಡೆ ಹಾನಿ ಸಂಭವಿಸಿದೆ. ಪುದು ಗ್ರಾಮದ ಸುಜೀರು ಬದಿಗುಡ್ಡೆಯಲ್ಲಿ ಅಬೂಬಕ್ಕರ್ ಸಿದ್ದಿಕ್ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದ್ದು, ಮನೆಯವರು ಬೇರೆಡೆಗೆ ಸ್ಥಳಾಂತರಗೊAಡಿದ್ದಾರೆ. ಬಂಟ್ವಾಳ ಸಮೀಪದ ಲೊರೆಟ್ಟೋದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುರಿಯಾಳ ದುರ್ಗಾನಗರ ನಿವಾಸಿ ಅಪ್ಪಿ ಮೂಲ್ಯ, ಬಡಗಬೆಳ್ಳೂರು ಗ್ರಾಮದ ಬಾಳಿಕೆಯಲ್ಲಿ ವಾಮದೇವ, ವಿಟ್ಲಮುಡ್ನೂರಿನ ಮೂಡಾಯಿಮಾರುನಲ್ಲಿ ಸತೀಶ್ ಶೆಟ್ಟಿ ಅವರ ಕೊಟ್ಟಿಗೆ, ಅಳಿಕೆಯ ಕಾನತ್ತಡ್ಕದ ರಝಕ್, ನರಿಕೊಂಬು ಗ್ರಾಮದ ಶಾರದಾ ನೀಲಪ್ಪ, ವೀರಕಂಭ ಗ್ರಾಮದ ಮಜ್ಜೋನಿಯಲ್ಲಿ ಭಾಗಿ, ಅಮ್ಮುಂಜೆ ಗ್ರಾಮದ ಕೊರಗಪ್ಪ, ನರಿಕೊಂಬು ಗ್ರಾಮದ ಕರ್ಬೆಟ್ಟುನಲ್ಲಿ ಬಾಬು ಪೂಜಾರಿ ಅವರ ಮನೆಗಳಿಗೆ ಮರ, ತೆಂಗಿನಮರ ಬಿದ್ದು ಹಾನಿಯಾಗಿದೆ.

ಕರಿಯಂಗಳ ಗ್ರಾಮದ ಮಾರಿಯಮ್ಮ ಅವರ ಮನೆಯ ಮೇಲ್ಚಾವಣಿ ಕುಸಿದು ಭಾಗಶಃ ಹಾನಿಯಾಗಿದೆ. ಚೆನ್ನೆತ್ತೋಡಿ ಗ್ರಾಮದ ಕರಿಮಲೆಯಲ್ಲಿ ಶಿವರಾಮ ನಾಯಕ್ ಹಾಗೂ ಕಳ್ಳಿಗೆ ಗ್ರಾಮದ ದಿವಾಕರ್ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ.