Thursday, January 23, 2025
ಸುದ್ದಿ

ನಿರಂತರ ಮಳೆಯಿಂದ ಬಂಟ್ವಾಳದಲ್ಲಿ ನೀರಿನ ಮಟ್ಟ ಏರಿಕೆ : ಸೂಕ್ತ ವ್ಯವಸ್ದೆಗೆ ತಾಲೂಕು ಆಡಳಿತ ಸನ್ನದ್ಧ – ಕಹಳೆ ನ್ಯೂಸ್

ಬಂಟ್ವಾಳ: ಮಳೆ ನಿರಂತರವಾಗಿ ಸುರಿಯುತ್ತಿದ್ದು, ನೀರಿನ ಮಟ್ಟ ಏರಿಕೆಯಾಗುತ್ತಿದೆ, ಮಳೆಯಿಂದ ಹಾನಿ ಅಥವಾ ನೆರೆಯಿಂದ ತಗ್ಗು ಪ್ರದೇಶಗಳು ಮುಳುಗಡೆಯಾದ ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತವಾದ ರೀತಿಯಲ್ಲಿ ಸ್ಪಂದನೆ ನೀಡಬೇಕು. 24 ಗಂಟೆಯೂ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿರಬೇಕು , ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಲಾವೃತಗೊಳ್ಳುವ ಮುನ್ಸೂಚನೆ ಇರುವ ಮನೆಗಳನ್ನು ಖಾಲಿ ಮಾಡಿ ಅಂತಹ ಕುಟುಂಬಗಳನ್ನು ಕೂಡಲೇ ಗಂಜಿಕೇoದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆ ನಿರಂತರವಾಗಿ ಎಡೆಬಿಡದೆ ಸುರಿಯುವ ಕಾರಣ ಮತ್ತು ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದು ನೀರಿನಮಟ್ಟ ಏರಿಕೆಯಾಗಿದೆ, ಕುಮಾರದಾರ ನದಿಯಲ್ಲಿ ನೀರಿನ ಏರಿಕೆ ಕಂಡಿದ್ದು,ಸ್ನಾನ ಘಟ್ಟ ಮುಳುಗಡೆಯಾಗಿದೆ. ನೇತ್ರಾವತಿ ನದಿಯಲ್ಲಿ ನಿಧಾನವಾಗಿ ನೀರಿನ ಏರಿಕೆ ಕಂಡು ಬಂದಿದ್ದು, 7 ಮೀ ಎತ್ತರದಲ್ಲಿ ನೀರು ಹರಿಯುತ್ತಿದೆ. 8.5 ಮೀ ಅಪಾಯದ ಮಟ್ಟವಾಗಿದ್ದು, 7.5 ಮೀ ನಷ್ಟು ನೀರು ಬಂದರೆ ಬಂಟ್ವಾಳ ತಾಲೂಕಿನ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ.

ಮಳೆಯಿಂದ ನೇತ್ರಾವತಿ ನದಿಯ ನೀರು ಜಾಸ್ತಿಯಾಗಿ ಅಪಾಯದ ಮಟ್ಟದಲ್ಲಿ ಹರಿಯುವ ಸಂದರ್ಭದಲ್ಲಿ ಪ್ರಥಮವಾಗಿ ಪಾಣೆಮಂಗಳೂರಿನ ಆಲಡ್ಕ ಮತ್ತು ಬಸ್ತಿಪಡ್ಪು ಎಂಬಲ್ಲಿ ನೀರು ನುಗ್ಗುತ್ತದೆ. ಅಬಳಿಕ ತಾಲೂಕಿನ 11 ಗ್ರಾಮಗಳ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತದೆ.
ಪಾಣೆಮಂಗಳೂರು ಹೋಬಳಿಯ ಸಜೀಪ ಮೂಡ ಗ್ರಾಮದ ಕಾರಾಜೆ ದಾಸಬೈಲು, ಸಜೀಪ ಮುನ್ನೂರು ಗ್ರಾಮದ ನಾಗನವಳಚ್ಚಿಲ್, ಕುರುವಾರಕೇರಿ, ನಂದಾವರ, ಗೌಡ್ರಹಿತ್ಲು, ಹಾಲಾಡಿ,ಪರಾರಿ. ಬಿ.ಮೂಡ ಗ್ರಾಮದ ಬಸ್ತಿಪಡ್ಪು,ಕಂಚಿಕಾರ ಪೇಟೆ,ತಲಪಾಡಿ,ಜುಮಾದಿಗುಡ್ಡೆ, ಪರಾರಿ,ನಂದರಬೆಟ್ಟು,ಭAಡಾರಿಬೆಟ್ಟು. ಪಾಣೆಮಂಗಳೂರು ಗ್ರಾಮದ ಜೈನರಪೇಟೆ,ಆಲಡ್ಕ, ಬೋಗೊಡಿ, ಗುಡ್ಡೆಯಂಗಡಿ, ಆಲಡ್ಕ,ಬಂಗ್ಲೆಗುಡ್ಡೆ. ಕಡೇಶಿವಾಲಯ ಗ್ರಾಮದ ರಥಬೀದಿ. ಬರಿಮಾರು ಗ್ರಾಮದ ಕಡವಿನ ಬಳಿ. ನರಿಕೊಂಬು ಗ್ರಾಮದ ಪುತ್ರೋಟಿಬೈಲು,ಬೈಪಾಸೆ, ಕರ್ಬೆಟ್ಟು,ಕಲ್ಯಾರು. ಪುದು ಗ್ರಾಮದ ಪುಂಚಮೆ,ಫರAಗಿಪೇಟೆ, ಅಮ್ಮೆಮಾರ್. ತುಂಬೆ ಗ್ರಾಮದ ವಳವೂರು, ಕೆಳಗಿನ ತುಂಬೆ,ಮಲ್ಲಿ, ತುಂಬೆ ಕುನಿಲ್ ಸ್ಕೂಲ್ ಬಳಿ. ಕರಿಯಂಗಳ ಗ್ರಾಮದ ಕರಿಯಂಗಳ,ಪೊಳಲಿ, ಪಲ್ಲಿಪಾಡಿ. ಅಮ್ಮುಂಜೆ ಗ್ರಾಮದ ಹೊಳೆಬದಿ ಮುಂತಾದ ಕಡೆಗಳಲ್ಲಿ ನೀರು ನುಗ್ಗುತ್ತದೆ.

ತಾಲೂಕು ಆಡಳಿತ ಸನ್ನದ್ಧ : ತಹಶಿಲ್ದಾರ್ ಎಸ್.ಬಿ.ಕೂಡಲಗಿನೇತ್ರಾವತಿ ನೀರಿನ ಹರಿವು ಹೆಚ್ಚಳವಾಗಿದೆ,ಆದರೆಯಾವುದೇಅಪಾಯವಿಲ್ಲ.ಸದ್ಯಯಾವುದೇಪ್ರದೇಶಗಳುಮುಳುಗಡೆಯಾಗಿಲ್ಲ.ಆದರೂ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ತಾಲೂಕು ಆಡಳಿತ ಕೇಂದ್ರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಪಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಶಾಸಕರ ಸೂಚನೆಯಂತೆ ನೆರೆ ನಿರ್ವಹಣೆ ದೃಷ್ಟಿಯಿಂದ ಒಟ್ಟು ಏಳು ತಂಡಗಳನ್ನು ರಚಿಸಲಾಗಿದೆ.

ತಾಲೂಕಿನಲ್ಲಿ ಒಟ್ಟು 9 ಕಡೆಗಳಲ್ಲಿ ಕಾಳಜಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ನೆರೆ ಅಥವಾ ಇನ್ನಿತರ ಪಾಕೃತಿಕ ವಿಕೋಪ ದಡಿಯಲ್ಲಿ ಸಮಸ್ಯೆ ಉಂಟಾದರೆ ಈ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಅವರು ತಿಳಿಸಿದ್ದಾರೆ. ಬಂಟ್ವಾಳದ ಪ್ರವಾಸಿ ಮಂದಿರ ಮತ್ತು ಪಾಣೆಮಂಗಳೂರು ಶಾರದ ಹೈಸ್ಕೂಲ್ ನಲ್ಲಿ ಈ ಪೇಟೆಯ ಭಾಗದ ಜನರಿಗೆ ವ್ಯವಸ್ಥೆ ಮಾಡಿದೆ ಉಳಿದಂತೆ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ವ್ಯವಸ್ಥೆ ಮಾಡಲಾಗಿದೆ.

ತಾಲೂಕಿನ ಜನರ ಹೆದರುವ ಅವಶ್ಯಕತೆ ಇಲ್ಲ, ನೆರೆಯ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಕಲವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಸರ್ವಸನ್ನದ್ದವಾಗಿದೆ.ನೆರೆಯ ಸಂದರ್ಭದಲ್ಲಿ ನದಿ ಬದಿಯ ಜನರನ್ನು ಸಾಗಿಸಲು ದೋಣಿ ಸಹಿತ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿದೆ ಎಂದು ತಹಶಿಲ್ದಾರ್ ಕೂಡಲಗಿ ತಿಳಿಸಿದ್ದಾರೆ.
ಆದರೆ ಅನಾವಶ್ಯಕವಾಗಿ ಜನರು ನೀರಿಗೆ ಇಳಿಯುವುದು, ನೀರಿನಲ್ಲಿ ಆಡುವುದಕ್ಕೆ ಹೋಗಬಾರದು, ನದಿ ತೀರದ ಜನರು ಹೆಚ್ಚು ಜಾಗರೂಕತೆಯಿಂದ ಇರಬೇಕು.ಮಕ್ಕಳು ನದಿ ತೀರಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.