Friday, January 24, 2025
ಸುದ್ದಿ

ಕಬಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಖಾಸಗಿ ಬಸ್ – ಕಹಳೆ ನ್ಯೂಸ್

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಚರಂಡಿಗಿಳಿದ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಬಕ ಸಮೀಪ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಕಡೆಯಿಂದ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ವಾಲಿ ನಿಂತಿದೆ. ಘಟನೆಯಲ್ಲಿ ಚಾಲಕ ಸಹಿತ ಪ್ರಯಾಣಿಕರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಬಕದ ನೀರಪಳಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು, ನಿರಂತರವಾಗಿ ಸುರಿಯುವ ಮಳೆಗೆ ಈ ಘಟನೆ ಸಂಭವಿಸಿರಬೇಕು ಎಂದು ಹೇಳಲಾಗಿದೆ. ಜೋರಾಗಿ ಮಳೆ ಸುರಿಯುವುದು ಒಂದು ಕಡೆಯಾದರೆ ಇನ್ನೊಂದು ಕಡೆ ರಸ್ತೆ ಹಾಳಾಗಿದೆ. ಹಾಗಾಗಿ ಚಾಲಕರು ಹೆಚ್ಚಿನ ಜಾಗರೂಕತೆಯಿಂದ ನಿಧಾನವಾಗಿ ಚಾಲನೆ ಮಾಡುವಂತೆ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರು ಮನವಿ ಮಾಡಿದ್ದಾರೆ.

ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಚಾಲಕರ ಸಹಕಾರ ನೀಡಿ ಎಂದು ಅವರು ಮನವಿ ಮಾಡಿದ್ದಾರೆ