ಮಂಗಳೂರು: ‘ಟೇಸ್ಟ್ ಅಟ್ಲಾಸ್’ ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಂಗಳೂರು ಮೂಲದ ಐಸ್ ಕ್ರೀಂ ಸಂಸ್ಥೆಗೂ ಸ್ಥಾನ ಸಿಕ್ಕಿದೆ.
ವಿಶ್ವದ ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ‘ಟೇಸ್ಟ್ ಅಟ್ಲಾಸ್’ ಇತ್ತೀಚೆಗೆ ವಿಶ್ವದ ಬೀದಿ ಬದಿಯಲ್ಲಿ ಸಿಗುವ ಸಿಹಿ ತಿನಿಸುಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತ್ತು. ಇದೀಗ ಐಸ್ ಕ್ರೀಂಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದ್ದು, ಐಸ್‌ಕ್ರೀಮ್‌ನ ಗುಣಮಟ್ಟ, ಬಳಕೆಯಾಗುವ ಪದಾರ್ಥ ಹಾಗೂ ತಯಾರಿಸುವ, ಮಾರಾಟ ಮಾಡುವ ಸಂಸ್ಥೆಗಳನ್ನು ಕೂಡ ಹೆಸರಿಸಿದೆ.
ಸಂಸ್ಥೆ ಬಿಡುಗಡೆ ಮಾಡಿದ ಅಗ್ರ 100ರ ಪಟ್ಟಿಯಲ್ಲಿ ಮಂಗಳೂರಿನ ಪಬ್ಬಾಸ್‌ನಲ್ಲಿ ಸಿಗುವ ಗಡ್‌ಬಡ್ ಐಸ್‌ಕ್ರೀಮ್‌ಗೆ ಸ್ಥಾನ ನೀಡಲಾಗಿದೆ. ಮುಂಬಯಿಯ ಅಪ್ಸರಾ ಐಸ್‌ಕ್ರೀಮ್ ತಯಾರಿಸುವ ಗ್ವಾವಾ ಐಸ್‌ಕ್ರೀಮ್ (ಪೇರಳೆ ಐಸ್ ಕ್ರೀಮ್) ಗೂ ಸ್ಥಾನ ಸಿಕ್ಕಿದೆ. ಇದು ಮೂಲತಃ ಮಂಗಳೂರು ಮೂಲದವರಿಂದ ಹುಟ್ಟಿ ಬೆಳೆದ ಸಂಸ್ಥೆಯಾಗಿದೆ.
ಇನ್ನು ಬೆಂಗಳೂರಿನ ಜನಪ್ರಿಯ ಡೆತ್ ಬೈ ಚಾಕಲೇಟ್‌ಗೂ ಟೇಸ್ಟ್ ಅಟ್ಲಾಸ್ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಈ ಐಸ್ ಕ್ರೀಂ ಅನ್ನು ಕಾರ್ನರ್ ಹೌಸ್‌ನಲ್ಲಿ ತಯಾರಿಸಲಾಗುತ್ತದೆ.