Sunday, January 26, 2025
ಸುದ್ದಿ

ಕೆಲ್ಲಪುತ್ತಿಗೆ ರಸ್ತೆ ತುಂಡಾಗಿ ಗದ್ದೆಗಳಿಗೆ ಪ್ರವೇಶಿಸಿದ ನೀರು ಮಣ್ಣು – ಕಹಳೆ ನ್ಯೂಸ್

ಮೂಡುಬಿದಿರೆ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲ್ಲಪುತ್ತಿಗೆಯ ಪರಾರಿ ಬೀಡು ಎಂಬಲ್ಲಿ ನೂತನವಾಗಿ ನಿರ್ಮಿಸಿರುವ ರಸ್ತೆಯು ಭಾನುವಾರ ತುಂಡಾಗಿ ಮಳೆಯ ನೀರು ಮತ್ತು ಮಣ್ಣು ಗದ್ದೆಗೆ ಸೇರಿ ಹೂಳು ತುಂಬಿಕೊoಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ದರೆಗುಡ್ಡೆ ಗ್ರಾ.ಪಂ.ವ್ಯಾಪ್ತಿಯ ಕೆಲ್ಲಪುತ್ತಿಗೆ ಭೂತರಾಜ ಗುಡ್ಡೆಯಿಂದ ಪರಾರಿಬೀಡುವಿಗೆ ಸಂಪರ್ಕ ಕಲ್ಪಿಸಿ ನೂತನವಾಗಿ ನಿರ್ಮಿಸಿರುವ ರಸ್ತೆಯ ಕಾಮಗಾರಿಯು ಅರ್ಧಂಬರ್ಧವಾಗಿತ್ತು. ಇದೀಗ ಬೀಸುತ್ತಿರುವ ಭಾರೀ ಮಳೆಯಿಂದಾಗಿ ಹತ್ತಿರದ ಮೂಡುಮಲೆಯಿಂದ ಹರಿದು ಬಂದ ನೀರು ರಸ್ತೆಯಲ್ಲಿ ತುಂಬಿಕೊAಡಿದ್ದು ಇದರ ಪರಿಣಾಮ ರಸ್ತೆ ತುಂಡಾಗಿ ತೋಡಿನ ಮೂಲಕ ನೀರು ಮತ್ತು ಮಣ್ಣು ಅಲ್ಲಿದ್ದ ಎಲ್ಲಾ ಗದ್ದೆಗಳಿಗೆ ತುಂಬಿಕೊAಡು ರೈತರಿಗೆ ಅಪಾರ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು