ಬಂಟ್ವಾಳ: ಪುದು ಗ್ರಾ.ಪಂ. ನ ಒಂದು ಸದಸ್ಯ ಸ್ಥಾನಕ್ಕೆ ಮಳೆಯ ನಡುವೆ ಮತದಾನ ಪ್ರಕ್ರಿಯೆಗಳು ನಡೆದವು.
ಬಂಟ್ವಾಳ ತಾಲೂಕಿನ ಮಂಗಳೂರು ಕ್ಷೇತ್ರದ ಪುದು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರೋರ್ವರು ಮರಣ ಹೊಂದಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು.
ಹಿಂದುಳಿದ ವರ್ಗ ಎ. ಮೀಸಲಾತಿಯಲ್ಲಿ ಸ್ಪರ್ಧಿಸಿ ಸದಸ್ಯನಾಗಿ ಆಯ್ಕೆಯಾಗಿದ್ದ ಹುಸೈನ್ ಅವರು ಮರಣ ಹೊಂದಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು.
ಇಲ್ಲಿ 414 ಪುರುಷರು, 416 ಮಹಿಳೆಯರು ಸೇರಿ ಒಟ್ಟು 830 ಮತದಾರರು ಇದ್ದು. ಇವರ ಪೈಕಿ 284 ಪುರುಷರು, 288 ಮಹಿಳೆಯರು ಸೇರಿ ಒಟ್ಟು 572 ಮಂದಿ ಮತ ಚಲಾಯಿಸಿದ್ದಾರೆ. ಪುರುಷರು ಶೇ.68.60 ಹಾಗೂ ಮಹಿಳೆಯರು ಶೇ.69.23 ಸೇರಿ ಒಟ್ಟು ಶೇ.68.92 ಮತದಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು (ದಕ್ಷಿಣ ಭಾಗ) ಮತಗಟ್ಟೆಯಲ್ಲಿ ಮತದಾನ ನಡೆಯಿತು. ಜುಲೈ 26 ರಂದು ಮತ ಎಣಿಕೆ ನಡೆಯಲಿದೆ.
ತೆರವಾದ ಒಂದು ಸ್ಥಾನಕ್ಕೆ ಒಟ್ಟು ಮೂರು ಮಂದಿ ಸ್ಪರ್ಧೆಗಿಳಿದಿದ್ದು, ಅಬ್ದುಲ್ ಲತೀಫ್, ಮುಹಮ್ಮದ್ ಅಶ್ರಫ್, ಮೊಹಮ್ಮದ್ ಇಕ್ಬಾಲ್ ನಡುವೆ ಯಾರು ಗೆಲ್ಲುವರು ಎಂಬುದು ಕುತೂಹಲಕಾರಿ ಎಲ್ಲರೂ ಒಂದೇ ಸಮುದಾಯದವರು ಎಂಬುದು ವಿಶೇಷ.