Tuesday, November 26, 2024
ಉಡುಪಿಸುದ್ದಿ

ಉಡುಪಿ: ಜಲಪಾತ ವೀಕ್ಷಣೆಗೆ ತೆರಳಿದ ಯುವಕ ಕಾಲು ಜಾರಿ ಬಿದ್ದು ನೀರುಪಾಲು – ಕಹಳೆನ್ಯೂಸ್

ಉಡುಪಿ : ಜಲಪಾತ ವೀಕ್ಷಣೆಗೆ ತೆರಳಿದ ಯುವಕ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಕೊಲ್ಲೂರು ಪೆÇಲೀಸ್ ಠಾಣಾ ವ್ಯಾಪ್ತಿಯ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಯುವಕ ನೀರಿಗೆ ಬೀಳುತ್ತಿರುವ ಭಯಾನಕ ದೃಶ್ಯ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ನೀರುಪಾಲಾದ ಯುವಕ.

ನಿನ್ನೆ ಭಾನುವಾರವಾದ್ದರಿಂದ ಶರತ್ ಮಧ್ಯಾಹ್ನ ಕೊಲ್ಲೂರಿಗೆ ತನ್ನ ಸ್ನೇಹಿತ ಗುರುರಾಜ್ ನೊಂದಿಗೆ ಕಾರಿನಲ್ಲಿ ಬಂದಿದ್ದರು. ಬಳಿಕ ಅಲ್ಲಿಂದ ಶರತ್ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಅನಾಹುತ ನಡೆದು ಹೋಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಶರತ್ ಸ್ನೇಹಿತ ಗುರುರಾಜ್ ಸಮೀಪದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸಿಬ್ಬಂದಿ ಪೆÇಲೀಸರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದ್ದಾರೆ .ಆದರೆ ಶರತ್ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗಳು, ಕೊಲ್ಲೂರು ಪೆÇಲೀಸರು ಸೋಮವಾರ ಬೆಳಿಗ್ಗೆನಿಂದಲೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈಜುಪಟು ಈಶ್ವರ್ ಮಲ್ಪೆ ಮತ್ತವರ ತಂಡವೂ ಆಗಮಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶರತ್ ಸ್ವ ಉದ್ಯೋಗಿಯಾಗಿದ್ದು, ಅವರ ಸ್ನೇಹಿತ ಗುರುರಾಜ್ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕಳೆದ ಕೆಲ ದಿನಗಳಿಂದ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಅರಶಿನಗುಂಡಿ ಜಲಪಾತದಲ್ಲಿ ಪ್ರವಾಸಿಗರಿಗೆ ನಿμÉೀಧ ಹೇರಲಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಪ್ರವೇಶ ದ್ವಾರದಲ್ಲಿರುವುದನ್ನು ಗಮನಿಸಿದ ಶರತ್ ಹಾಗೂ ಆತನ ಸ್ನೇಹಿತ ಬೇರೊಂದು ದಾರಿಯಲ್ಲಿ ಜಲಪಾತಕ್ಕೆ ತೆರಳಿದ್ದರು ಎನ್ನಲಾಗಿದೆ.

ಇನ್ನು ಶರತ್ ಸ್ನೇಹಿತ ಗುರುರಾಜ್ ಜಲಪಾತದ ದೃಶ್ಯಗಳನ್ನು ತನ್ನ ಮೊಬೈಲ್‍ನಲ್ಲಿಸೆರೆ ಹಿಡಿಯುತ್ತಿರುವ ವೇಳೆಯಲ್ಲೇ ಶರತ್ ಕಾಲು ಜಾರಿ ಬಿದ್ದಿದ್ದು, ಆ ದೃಶ್ಯವೂ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.