Recent Posts

Tuesday, November 26, 2024
ಸುದ್ದಿ

ಅದ್ದೂರಿಯಾಗಿ ಮೂಡಿಬಂದ ಬಂಟ ಸಮುದಾಯದ ಗೌಜಿ ಗಮ್ಮತ್ತು ‘ತುಳುನಾಡ ಬಂಟೆರ ಪರ್ಬ 2023’ ಕಾರ್ಯಕ್ರಮ : ಕಹಳೆ ನ್ಯೂಸ್

ಪುತ್ತೂರಿನ ಎಂ ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ, ತುಳುನಾಡ ಬಂಟರ ಪರ್ಬ 2023 ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ, ಬಂಟರ ಸಂಘ ಪುತ್ತೂರು ತಾಲೂಕು, ಮಹಿಳಾ ಬಂಟರ ಸಂಘ ಪುತ್ತೂರು ತಾಲೂಕು ಮತ್ತು ವಿದ್ಯಾರ್ಥಿ ಬಂಟರ ಸಂಘದ ಪುತ್ತೂರು ತಾಲೂಕು ಇದರ ಸಹಕಾರದೊಂದಿಗೆ, ಯುವ ಬಂಟರ ಸಂಘ ಪುತ್ತೂರು ತಾಲೂಕು ಯುವ ಬಂಟದ ದಿನಾಚರಣೆ ಪ್ರಯುಕ್ತ, ತುಳುನಾಡ ‘ಬಂಟರ ಪರ್ಬ 2023’ ಕಾರ್ಯಕ್ರಮವು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಯುವ ಬಂಟರ ದಿನಾಚರಣೆಯ ಉದ್ಘಾಟನೆಯನ್ನ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಇವರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಬಂಟರ ಪರವಾಗಿ ಯಾವುದೇ ಸರಕಾರ ಈತನಕ ಬೆಂಬಲ ನೀಡಿಲ್ಲ.ರಾಜ್ಯದ ಈಗಿನ ಸರಕಾರ ಬಂಟರ ಅಭಿವೃದ್ಧಿ ಪ್ರಾಧಿಕಾರಕ್ಕೆ 250 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ.

ಬಂಟ ಸಮಾಜದ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಉದ್ದೇಶ ನನ್ನದು. ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡಬೇಕೆಂದು ನಾನು ವಿಧಾನ ಸಭಾಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಪುತ್ತೂರು ಬಂಟ ಸಮಾಜದಿಂದ ಎಲ್‌ಕೆಜಿಯಿಂದ ಪ್ರಾಥಮಿಕ ಹಂತ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಸಂಸ್ಥೆ ಆಗಬೇಕೆಂಬ ಕಲ್ಪನೆ ಇದೆ.

ಬಂಟ ಸಮಾಜದ ಅಭಿವೃದ್ಧಿಗೆ ಪೂರ್ಣ ರೀತಿಯ ಸಹಕಾರ ನೀಡುತ್ತೇನೆ. ಜೊತೆಗೆ ಬಂಟರ ಸಂಘದಿoದ ನೂತನವಾಗಿ ಜಾಗ ಖರೀದಿಗೂ ಸಹಕಾರ ನೀಡುತ್ತೇನೆ ಎಂದು ಹೇಳಿದರಲ್ಲದೆ, ಯುವ ಬಂಟರು ಒಗ್ಗೂಡಿ ಅದ್ಭುತವಾದ ರ‍್ಯಕ್ರಮ ಆಯೋಜಿಸಿದ್ದಾರೆ. ಬಂಟರ ಭವನ ಸಮಾಜ ಬಾಂಧವರಿoದ ತುಂಬಿದ್ದು, ತುಂಬಾ ಸಂತೋಷ ತಂದಿದೆ. ಬಂಟ ಸಮಾಜದ ಗೌರವ, ಘನತೆಯನ್ನು ಎತ್ತಿ ತೋರಿಸುವ ಕೆಲಸವನ್ನು ಸದಾ ಮಾಡುತ್ತೇನೆ. ಜೊತೆಗೆ ಭ್ರಷ್ಟಾಚಾರ ಮುಕ್ತವಾದ ಆಡಳಿತವನ್ನು ನಾನು ನೀಡುತ್ತೇನೆ ಎಂದು ಹೇಳಿದರು.

ಇನ್ನು ವೇದಿಕೆಯಲ್ಲಿ ಬಂಟ ಸಮುದಾಯದ ಹಿರಿಯ ಚೇತನಗಳನ್ನ ಸ್ಮರಿಸುವ ಬಂಟ ಸ್ಮೃತಿ ನಡೆದಿದ್ದು, 3 ಜನ ಬಂಟ ಹಿರಿಯರನ್ನ ಸ್ಮರಿಸಲಾಯಿತು.. ಪುತ್ತೂರಿನ ನಿವೃತ್ತ ತಹಾಶೀಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈ, ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮುಂಡಾಳುಗುತ್ತು ತಿಮ್ಮಪ್ಪ ರೈ, ಜಯ ಕರ್ನಾಟಕ ಸಂಸ್ಧಾಪಕರಾದ ಎನ್.ಮುತ್ತಪ್ಪ ರೈ ಇವರನ್ನ ಸ್ಮರಿಸಲಾಯಿತು..

ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈಯವರು ಮಾತನಾಡಿ ಯುವ ಬಂಟರ ಸಾಧನೆಗಳು ಆಕಾಶದ ಎತ್ತರಕ್ಕೇರಲಿ ಎಂದು ಶುಭಹಾರೈಸಿದರು.

ತುಳುನಾಡ ಬಂಟೆರೆ ಪರ್ಬ 2023 ಸಾಂಸ್ಕೃತಿಕ ಸ್ಪರ್ಧೆ ಹಾಗೂ ಹಲವು ಸಾಂಸ್ಕೃತಿಕಾ ಕಾರ್ಯಕ್ರಮ, ಸಿನೆಮಾ ರಂಗದ ಕಲಾವಿದರು, ನಟ ನಟಿಯರ ಆಗಮನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನ ತುಂಬಿತ್ತು.

ಇನ್ನು ಮಧ್ಯಾಹ್ನ ತುಳುನಾಡ ಬಂಟೆರೆ ಪರ್ಬ 2023 ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರುಗೂ ತುಳುನಾಡಿನ ಸಾಂಪ್ರದಾಯದ ಪ್ರಕಾರ ಭೋಜನದ ವ್ಯವಸ್ದೆಯನ್ನು ಮಾಡಲಾಗಿತ್ತು. ತುಳುನಾಡ ಬಂಟೆರೆ ಪರ್ಬ 2023 ಹಲವು ವಿಶೇಷ ಆಕರ್ಷಣೆಯ ಮೂಲಕ ವಿನೂತನವಾಗಿ ಮೂಡಿಬಂದಿದೆ.