ಪೆರ್ನೆ : ಕರಾವಳಿಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ.
ಕಳೆಂಜ ಗ್ರಾಮದ ಅರ್ಬಿ ಸುತ್ತಲಿನ ತೋಟದ ಪ್ರದೇಶಗಳು ಮಳೆಯ ಅಬ್ಬರಕ್ಕೆ ನೀರಿನಲ್ಲಿ ಮುಳುಗಡೆಯಾಗಿದ್ದು, ಸಮೀಪದಲ್ಲಿ ಹರಿಯುವ ನೇತ್ರಾವತಿಯ ನೀರು ಹೆಚ್ಚಳವಾಗಿ ತಗ್ಗು ಪ್ರದೇಶಗಳಿಗೆ ನೀರು ಹರಿಯುತ್ತಿದೆ.
ಕಳೆದ ತಿಂಗಳು ಎಪ್ರಿಲ್, ಮೇಯಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ನದಿ ಇದೀಗ ತುಂಬಿ ತುಳುಕುತ್ತಿದೆ. ಮೀನು ಹಿಡಿಯುವ ಪ್ರೇಕ್ಷಣೀಯ ಸ್ಥಳವಾದ ಅರ್ಬಿಗುಂಡಿಯಲ್ಲಿ ನಿಂತು ನೋಡಿದರೆ ಸುತ್ತಲಿನ ಪ್ರದೇಶ ನೀರಿನಿಂದ ಆವರಿಸಿದ್ದು. ಕಂಡು ಬರುತ್ತದೆ.