ಮಣಿಪುರದಲ್ಲಿ ನಡೆದ ಕೃತ್ಯವನ್ನು ಖಂಡಿಸಿ : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್
ಬಂಟ್ವಾಳ: ಮಣಿಪುರದಲ್ಲಿ ನಡೆದ ಕೃತ್ಯವನ್ನು ಖಂಡಿಸಿ, ಇಲ್ಲಿ ರಾಷ್ಟ್ರಪತಿ ಅಳ್ವಿಕೆ ತರಬೇಕು ಎಂದು ಒತ್ತಾಯಿಸಿ ಬಿಸಿರೋಡಿನ ಪ್ಲೈ ಓವರ್ ನ ಅಡಿಭಾಗದಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿಚ ಬಿ.ರಮಾನಾಥ ರೈ ಮಾತನಾಡಿ, ಮಣಿಪುರದ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರವೇ ನೇರ ಕಾರಣ ಎಂದು ಅರೋಪ ಮಾಡಿದರು.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗೆ ಮೂಲಕ ಕಾರಣ ಆಡಳಿತ ಮಾಡುವ ಸರಕಾರ,ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ, ಅಂತಹ ಸರಕಾರಗಳಿಗೆ ಆಡಳಿತ ನಡೆಸಲು ಅರ್ಹತೆ ಇಲ್ಲ ಎಂದು ಆರೋಪ ಮಾಡಿದರು. ಘಟನೆಯ ಹಿಂದೆ ಪಿತೂರಿ ಇದೆ ಎಂದು ತಿಳಿದುಕೊಳ್ಳಬೇಕಾಗಿದೆ. ಸಂಘಪರಿವಾರಿದ ಜನರ ಇಂತಹ ಕೆಲಸಗಳಲ್ಲಿ ನಿಸ್ಸೀಮರು ಎಂದು ಅವರು ಆರೋಪ ಮಾಡಿದರು. ಘರ್ಷಣೆಯಾಗಬೇಕು ಎಂಬ ಉದ್ದೇಶದಿಂದ ಇಲ್ಲಿ ಫೇಕ್ ನ್ಯೂಸ್ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದರು.
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ, ಅಚ್ಚೇದಿನ್ ಬರುತ್ತದೆ ಎಂದು ಹೇಳಿದವರಿಗೆ ಈ ಘಟನೆ ಶೋಭೆ ತರುವುದಿಲ್ಲ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು. ಉತ್ತರಪ್ರದೇಶದಲ್ಲಿ ದಲಿತ ಮಹಿಳೆಯರ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿದ್ದು ಇದು ಸರಕಾರದ ಸಾಧನೆಯಾ ಎಂದು ಪ್ರಶ್ನಿಸಿದರು. ಮಣಿಪುರದಲ್ಲಿ ನಡೆದಘಟನೆ ಇಡೀ ಕರ್ನಾಟಕದ ಜನತೆ ಖಂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪಿಯೂಸ್ ಎಲ್ ರೋಡ್ರಿಗಸ್, ಮಹಮ್ಮದ್ ಶರೀಫ್, ಬೇಬಿಕುಂದರ್, ಸುದೀಪ್ ಕುಮಾರ್, ಪರಮೇಶ್ವರ ಮೂಲ್ಯ, ಸುಭಾಶ್ಚಂದ್ರ ಶೆಟ್ಟಿ ,ಅಬ್ಬಾಸ್ ಆಲಿ, ಜೆಸಿಂತ ಡಿ.ಸೋಜ, ಮಲ್ಲಿಕಾ ಶೆಟ್ಟಿ, ಐಡಾ ಸುರೇಶ್, ಜಯಂತಿ ಪೂಜಾರಿ,ವೆಂಕಪ್ಪ ಪೂಜಾರಿ, ಎಂಎಸ್.ಮಹಮ್ಮದ್, ಪ್ಲೋಸಿ ಡಿ.ಸೋಜ, ಪದ್ಮನಾಭ ರೈ, ಸುರೇಶ್ ನಾವೂರ, ಸದಾನಂದ ಶೆಟ್ಟಿ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.