Recent Posts

Monday, January 20, 2025
ಸುದ್ದಿ

ಆತ್ಮಹತ್ಯೆಗೆ ಯತ್ನ: ಮಗುವಿನ ಸಮೇತ ಬಾವಿಗೆ ಹಾರಿದ ತಾಯಿ – ಕಹಳೆ ನ್ಯೂಸ್

ಕಾರವಾರ ಅಂಗಡಿ ಗ್ರಾಮದ ಕಳಸವಾಡದ ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಈ ಘಟನೆಯಲ್ಲಿ ಮಗು ಸ್ಥಳದಲ್ಲಿಯೇ ಮೃತಪಟ್ಟರೆ, ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಇಲ್ಲಿನ ನಿವಾಸಿ ಅಲ್ಫಾನ್ಸೊ ಕುಟಿನ್ಹೊ ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಅವರ ಪುತ್ರಿ ಸಲೂನ ಕುಟಿನ್ಹೊ ಮೃತಪಟ್ಟಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಫಾನ್ಸೊ ಪತಿ ವಿದೇಶದಲ್ಲಿದ್ದು, ತಾಯಿ ಮತ್ತು ಮಗು ಕಳಸವಾಡದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಹಿಳೆಯು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನಲಾಗಿದ್ದು, ತನ್ನ ಮಗುವಿನ ಸಮೇತ ಬಾವಿಗೆ ಹಾರಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ನೀರಿನಲ್ಲಿ ಏನೋ ಬಿದ್ದ ಶಬ್ದ ಕೇಳಿ ಹತ್ತಿರದ ನಿವಾಸಿಗಳು ಬಂದು ಇಬ್ಬರನ್ನೂ ಬಾವಿಯಿಂದ ಹೊರ ತೆಗೆದಿದ್ದಾರೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.