ಕುಂದಾಪುರ : ತಾಲೂಕು ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳಿಗೆ ಸರಕಾರಿ ಭೂಮಿ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಕೇರಳ ಕೊರಗ ಸಮುದಾಯ ಅಭಿವೃದ್ಧಿ ಸಂಘಗಳ ಒಕ್ಕೂಟದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಂಬಂಧಿಸಿದಂತೆ ಕೊರಗ ಬುಡಕಟ್ಟು ಸಮುದಾಯವು ಆದಿಮ ಅತ್ಯಂತ ಹಿಂದುಳಿದ ಬುಡಕಟ್ಟು ಪಂಗಡವಾಗಿದ್ದು, ಕೇಂದ್ರ ಸರಕಾರವು 1996 ರಲ್ಲಿ ವಿಶೇಷವಾದ ನೋಟಿಫಿಕೇಶನ್, ಮಾಡಿ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟ ದುರ್ಬಲ,ಅಸಹಾಯಕ ಆಂಟಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯ (Particularly Vulnarable Tribal Group) ಎಂದು ಘೋಷಿಸಿದೆ. ಹೀಗೆ ಘೋಷಣೆಗೆ ಒಳಪಡುವ ಎಲ್ಲ ಸಮುದಾಯಗಳ ಪ್ರಮುಖ ಲಕ್ಷಣಗಳೆಂದರೆ ಕೃಷಿ ಪೂರ್ವ ನಾಗರೀಕತೆ, ಅಲೆಮಾರಿ, ಅರೆ ಅಲೆಮಾರಿ ಹಂತದಲ್ಲಿರುವುದು, ಕೊರಗ ಸಮುದಾಯದ ವಿಶೇಷ ಅಧ್ಯಯನ ಮಾಡಿರುವ ಡಾ.ಮಹಮದ್ ಫೀ ವರದಿಯಲ್ಲಿಯೂ ‘ಕೊರಗರ ಇಂದಿನ ಪರಿಸ್ಥಿಗೆ ಅವರು ಭೂಮಿಯನ್ನು ಹೊಂದದೇ ಇರುವುದು ಮತ್ತು ಕೃಷಿಕರಾಗಿರದೆ ಇರುವುದೇ ಅವರ ಎಲ್ಲಾ ಸಮಸ್ಯೆಗಳಿಗೂ ಮೂಲಭೂತ ಕಾರಣವಾಗಿದೆ.
ಆದ್ದರಿಂದ ಕೊರಗ ಸಮುದಾಯದ ಪ್ರತಿಯೊಂದು ಕುಟುಂಬಕ್ಕೂ ತಲಾ 25 ಎಕರೆ ಭೂಮಿ ನೀಡಿ ಅವರುಗಳು ಮಾದರಿ ಕೃಷಿಕರಾಗುವಂತೆ ಪುನರ್ ವಸತಿ ವ್ಯವಸ್ಥೆಗಳನ್ನು ಮಾಡುವುದು ಅತ್ಯಗತ್ಯ ಶಿಫಾರಸ್ಸು ಮಾಡಿದೆ. ಸರಕಾರ ಈ ವರದಿಯನ್ನು ಒಪ್ಪಿ 2003ರಿಂದ ಕೊರಗ ಕುಟುಂಬಗಳಿಗೆ ಕರ್ನಾಟಕ ಭೂ ಕಂದಾಯ ನಿಯಮಗಳು 1964, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969,ನೋಟಿಫಿಕೇಶನ್, ಸಂಖ್ಯೆ RD252GNA58ರ ದಿನಾಂಕ 13.11.1969 ಕರ್ನಾಟಕ ಸರಕಾರದ `ಗಜೆಟ್ ನೋಟಿಫಿಕೇಶನ್ 12/06/1969 ರಂತೆ ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ 1 ಎಕರೆ ಭೂಮಿಯನ್ನು ಮಂಜೂರಾತಿ ಮಾಡಲಾರಂಭಿಸಿತು. ಇದರ ಪರಿಣಾಮವಾಗಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸುಮಾರು 500 ಕುಟುಂಬಗಳಿಗೆ ಹಕ್ಕುಪತ್ರ ದೊರಕಿದೆ.
ಆದರೆ ಈ ಪ್ರಕ್ರಿಯೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಬೆರಳಣಿಕೆಯಷ್ಟು, ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ದೊರಕಿಸಿಕೊಳ್ಳುವುದು ಸಾಧ್ಯವಾಗಿದೆ. ಇತ್ತೀಚೆಗೆ ದಿನಾಂಕ : 20/02/2022 ರಂದು ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್. ಅಶೋಕ್ ರವರು ಉಡುಪಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಂಟೂರು ಗ್ರಾಮದ ಕುಮಾರ್ ಮತ್ತು ಪಾರ್ವಶಿರವರ ಮನೆಯಲ್ಲಿ ಬೆಳಗ್ಗಿನ ಉಪಹಾರ ಸೇವನೆ ಮಾಡಿದ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಡೀಮ್ಸ್ ಅರಣ್ಯ ವ್ಯಾಪ್ತಿಯಿಂದ ತೆರವು ಆದ ಭೂಮಿಯಿಂದ 1000 ಎಕ್ರೆ ಭೂಮಿಯನ್ನು ಕೊರಗ ಸಮುದಾಯದವರಿಗೆ ನೀಡುವುದಾಗಿ ತಮ್ಮ ಸಮುಖದಲ್ಲಿ ಘೋಷಣೆ ಮಾಡಿದ್ದರು. ತದ ನಂತರ ಕುಂದಾಪುರದಲ್ಲಿ ನಡೆದ ಕೊರಗರ ಭೂಮಿ ಹಬ್ಬದಲ್ಲಿ ಅತಿಥಿಯಾಗಿ ಭಾಗವಹಿಸಿದ `ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರು ಕೊರಗ ಸಮುದಾಯದವರಿಗೆ ಕಂದಾಯ ಭೂಮಿ ನೀಡುವುದಾಗಿ ಘೋಷಣೆ ಮಾಡಿದರು.
ಇದರ ಮುಂದುವರಿದ ಭಾಗವಾಗಿ ಸಂಘಟನೆಯ ವತಿಯಿಂದ ಕೊರಗ ಸಮುದಾಯ ಭೂರಹಿತರನ್ನು ಗುರುತಿಸಿ ದಿನಾಂಕ : 16/12/2022 ರಂದು ತಮಗೆ ಸಾಮೂಹಿಕವಾಗಿ 231 ಅರ್ಜಿಗಳನ್ನು ದರ್ಖಾನು ಅರ್ಜಿ ನಮೂನೆಯಲ್ಲಿ ಸಲ್ಲಿಸಿದ್ದೆವು. ಆದರೆ ತಮ್ಮ ಇಲಾಖೆಯಿಂದ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಇರುವುದಿಲ್ಲ ಇಂದು ನಾವು ಈ ವಿಷಯದ ಕುರಿತು ಪುನಃ ಹಕ್ಕೊತ್ತಾಯ ಮಾಡಿ ತಮಗೆ ಈ ಕುರಿತು ನೆನಪಿಸುತ್ತಿದ್ದೇವೆ. ಹಾಗೆಯೆ ಬಾಕಿ ಇರುವ ಅರ್ಜಿಗಳನ್ನು ಸಲ್ಲಿಸುತ್ತಿದ್ದೇವೆ. ಮುಂದಿನ ಒಂದು ತಿಂಗಳ ಒಳಗೆ ಇದಕ್ಕೆ ಸಂಬಂಧಿಸಿ ಭೂಮಿ, ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.