ಆರ್ಯಾಪು: ಗ್ರಾಮ ಪಂಚಾಯತ್ ಉಪಚುನಾವಣೆ; ಮತ್ತೇ ಬಿಜೆಪಿ ಗೆ ಸಡ್ಡು ಹೊಡೆದ ಪುತ್ತಿಲ ಪರಿವಾರ; ಬ್ಯಾಟ್ ಬೀಸಿ ಜಯಭೇರಿ ಬಾರಿಸಿದ ಸುಬ್ರಮಣ್ಯ ಬಲ್ಯಾಯ – ಕಹಳೆ ನ್ಯೂಸ್
ಪುತ್ತೂರು : ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಇಬ್ಬರು ಸದಸ್ಯರ ನಿಧನದಿಂದಾಗಿ ತೆರವಾಗಿರುವ ಎರಡು ಸ್ಥಾನಗಳಿಗೆ ಜು.23 ರಂದು ಉಪಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ.
ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆದ ಮತ ಎಣಿಕೆ ಮುಕ್ತಾಯಗೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಜಯಗಳಿಸಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಗದೀಶ್ ಭಂಡಾರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಂತಿಮ ಕಣದಲ್ಲಿದ್ದರು.
ಸುಬ್ರಹ್ಮಣ್ಯ ಬಲ್ಯಾಯ-499, ಪುರುಷೋತ್ತಮ ಪ್ರಭು-353, ಜಗದೀಶ ಭಂಡಾರಿ-140 ಮತ ಪಡೆದಿದ್ದಾರೆ. 7 ಮತ ತಿರಸ್ಕೃತಗೊಂಡಿದೆ. ಈ ಮೊದಲು ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ನಿವೃತ್ತ ಎಸ್.ಐ ರುಕ್ಮಯ್ಯ ಮೂಲ್ಯ ನಿಧನರಾದ ಹಿನ್ನೆಲೆ ಈ ಸ್ಥಾನ ತೆರವಾಗಿತ್ತು.