Recent Posts

Monday, January 20, 2025
ಪುತ್ತೂರು

ಪುತ್ತೂರು: ಪಡೀಲ್ ಸಮೀಪ ಮನೆ ಮುಂದೆ ನಿಲ್ಲಿಸಿದ ಮೆಸ್ಕಾಂ ಉದ್ಯೋಗಿಯೋರ್ವರಿಗೆ ಸೇರಿದ ಕಪ್ಪು ಬಣ್ಣದ “KA-21 EC-3435 ಹೋಂಡಾ ಆಕ್ಟಿವ 125” ಕಳವು -ಕಹಳೆ ನ್ಯೂಸ್

ಪುತ್ತೂರಿನಲ್ಲಿ ಮೆಸ್ಕಾಂ ಕೆಇಬಿ ಕೆಲಸದಲ್ಲಿದ್ದ ಮೌನೇಶ್ವರ ಹಡಪದ ಎಂಬವರ ಹೋಂಡಾ ಆಕ್ಟಿವ 125 ಕಳವು ಆಗಿದೆ. ಮೌನೇಶ್ವರ ಅವರು ಪುತ್ತೂರಿನ ಕೆಇಬಿಯಲ್ಲಿ ಲೈನ್ ಮ್ಯಾನ್ ಅಗಿ ಕೆಲಸ ಮಾಡಿಕೊಂಡು ಇದ್ರು. ಜು.25 ರಂದು ತಮ್ಮ ಕೆಲಸ ಮುಗಿದ ಬಳಿಕ ಪಡೀಲ್‌ನಲ್ಲಿರುವ ತಮ್ಮ ಬಾಡಿಗೆ ನಿವಾಸದಲ್ಲಿ ಇವರ ಹೋಂಡಾ ಆ್ಯಕ್ಟಿವ 125ನ್ನು ಪಾರ್ಕ್ ಮಾಡಿದ್ದಾರೆ.

ಮರುದಿನ ಕೆಲಸಕ್ಕೆಂದು ಹೊರಟಗ ಪಾರ್ಕ್ ಮಾಡಿದ ಜಾಗದಲ್ಲಿ ತಮ್ಮ ವಾಹನ ಇರಲ್ಲಿಲ್ಲ. ಇದರಿಂದ ಮೌನೇಶ್ವರ ಹಡಪದ ಅವರು ಗಾಬರಿಗೊಂಡಿದ್ದಾರೆ. ಜು.25 ರ 7;45 ರಿಂದ 8 ಗಂಟೆಯ ಒಳಗಾಗಿ ಈ ಕಳ್ಳತನ ನಡೆದಿರಬಹುದು ಎಂದು ಮೌನೇಶ್ವರರವರು ಸಂಶಯ ವ್ಯಕ್ತಪಡಿಸಿದ್ದು, ಇವರ ಹೋಂಡಾ ಆಕ್ಟಿವ 125 ಮೌಲ್ಯ ಸುಮಾರು 80000 ಆಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕರು ಕಪ್ಪು ಬಣ್ಣದ ಕೆಎ 21 ಇ ಸಿ 3435 ನಂಬರ್‌ನ ಹೋಂಡಾ ಆ್ಯಕ್ಟಿವ 125ನ್ನು ಕಂಡಲ್ಲಿ 9731131117 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದ್ದಾರೆ