Monday, November 25, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿಹೆಚ್ಚಿನ ಸುದ್ದಿ

ಪೆರ್ನೆ ಗ್ರಾಮ ಪಂಚಾಯತ್ ನಲ್ಲಿ‌ ಗ್ರಾಮ ಸಭೆ – ಹಲವು ವಿಚಾರಗಳ ಬಗ್ಗೆ ಚರ್ಚೆ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ಪೆರ್ನೆ ಗ್ರಾಮ ಪಂಚಾಯತ್ ನಲ್ಲಿ ಇಂದು ಗ್ರಾ‌ಮಸಭೆ ನಡೆದಿದೆ. 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಪೆರ್ನೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದಿದ್ದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ನೋಣಯ್ಯ ನಾಯ್ಕ ಆಗಮಿಸಿದ್ದು, ಪಿಡಿಓ ಸಂಜೀವ ನಾಯ್ಕ್, ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷರಾದ ವನಿತಾ ಹಾಗೂ ಪಂಚಾಯತ್ ಅದ್ಯಕ್ಷರಾದ ಸುನೀಲ್ ನೆಲ್ಸನ್ ಪಿಂಟೋ ನೇತೃತ್ವದಲ್ಲಿ ಸಭೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಇಲಾಖಾ, ಮೆಸ್ಕಾಂ ಇಲಾಖೆ, ಪಿಡಬ್ಲೂಡಿ ಇಂಜಿನಿಯರ್, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೂಕ್ತ ಮಾಹಿತಿಯನ್ನ ನೀಡಿದರು..

ಸಬೆಯಲ್ಲಿ ಗ್ರಾಮಸ್ಧರು ಮೂಲಭೂತ ಸೌಕರ್ಯ, ಅಭಿವೃದ್ದಿ ಕಾಮಗಾರಿ, ರಸ್ತೆ ಒಳಚರಂಡಿ ಹೀಗೆ ಹಲವು ಸಮಸ್ಯೆಗಳನ್ನ ಅಧಿಕಾರಿಗಳ ಮುಂದಿಟ್ಟು ಪರಿಹರಿಸುವಂತೆ ಮನವಿ‌ಮಾಡಿದ್ದಾರೆ.