Recent Posts

Sunday, January 19, 2025
ಸುದ್ದಿ

ರಾಜ್ಯಮಟ್ಟದ ಯುವವಿಜ್ಞಾನಿ ಪ್ರಶಸ್ತಿಗೆ ರಾಕೇಶ್ ಕೃಷ್ಣ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿ ರಾಕೇಶ್ ಕೃಷ್ಣ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಪ್ರಾಯೋಜಕತ್ವದ 2017-18ರ ರಾಜ್ಯಮಟ್ಟದ ಯುವವಿಜ್ಞಾನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿ ಡಾ.ನಾಗರಾಜ್ ಅವರ ನೇತೃತ್ವದ ವಿಜ್ಞಾನಿಗಳ ತಂಡ ಇತ್ತೀಚೆಗೆ ಈ ಆಯ್ಕೆಯನ್ನು ಘೋಷಣೆ ಮಾಡಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 102 ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಅಲ್ಲಿ ಕೇವಲ ನಾಲ್ಕು ಮಂದಿಯನ್ನು ಮಾತ್ರ ಯುವ ವಿಜ್ಞಾನಿ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಯ್ಕೆಯಾದವರಿಗೆ ಹತ್ತು ಸಾವಿರ ನಗದು ಬಹುಮಾನದೊಂದಿಗೆ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ. ಇವರು ಪುತ್ತೂರಿನ ರವಿಶಂಕರ್ ನೆಕ್ಕಿಲ ಹಾಗೂ ಡಾ.ದುರ್ಗಾರತ್ನ ದಂಪತಿಯ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು