ವಿಟ್ಲ: ಕೇಪು ಗ್ರಾಮದ ಕುದ್ದುಪದವು ಖಾಸಗೀ ಜಾಗದ ಮೂಲಕ ಕೇರಳದಿಂದ ಟ್ಯಾಂಕರ್ ನಲ್ಲಿ ತಂದ ತ್ಯಾಜ್ಯ ಮಿಶ್ರಿತ ನೀರನ್ನು ತೋಡಿಗೆ ಹರಿ ಬಿಡುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ವ್ಯಕ್ತಿಗಳ ಸಹಕಾರದೊಂದಿಗೆ ಕೇರಳ ಭಾಗದಿಂದ ತ್ಯಾಜ್ಯ ಮಿಶ್ರಿತ ನೀರನ್ನು ಕರ್ನಾಟಕದ ಗಡಿಯೊಳಗೆ ತರಲಾಗುತ್ತಿದ್ದು, ಕರ್ನಾಟಕದ ನೀರಿನ ಮೂಲಗಳಿಗೆ ಸೇರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಸ್ಥಳೀಯ ವ್ಯಕ್ತಿಗಳು ಹಣದ ಆಸೆಯಿಂದ ಈ ವಾಹನವನ್ನು ತಮ್ಮ ಖಾಸಗೀ ಜಾಗಕ್ಕೆ ತರಿಸಿಕೊಂಡಿ ಯಾರಿಗೂ ತಿಳಿಯಂದತೆ ತೋಡಿನ ನೀರಿಗೆ ಸೇರಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೇಪು ಪಂಚಾಯಿತಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಟ್ಯಾಂಕರ್ ಅನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಘಟನೆಯ ಬಗ್ಗೆ ವಿಟ್ಲ ಠಾಣೆಗೆ ದೂರನ್ನು ನೀಡಿದ್ದಾರೆ.