‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಾನೂನು ವ್ಯವಸ್ಥೆ ಹದಗೆಟ್ಟಿದೆ’ ; ಶಾಸಕ ಯಶ್ಪಾಲ್ ಸುವರ್ಣ –ಕಹಳೆ ನ್ಯುಸ್
ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದ ಆರೋಪಿಗಳು ಅಮಾಯಕರು ಎಂಬ ಶಾಸಕ ತನ್ವೀರ್ ಸೇಠ್ ಅವರ ಪತ್ರದ ವಿಚಾರದ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇಡೀ ರಾಜ್ಯ ಮಾತ್ರ ಅಲ್ಲ ಇಡೀ ದೇಶದಲ್ಲಿ ಡಿಜೆ ಹಳ್ಳಿ ಕೆಜೆ ಹಳ್ಳಿ ವಿಚಾರ ಗಂಭೀರವಾದ ಘಟನೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆ ಹಲ್ಲೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ತನ್ವೀರ್ ಸೇಠ್ ಅವರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ ಹಿನ್ನಲೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐನ 151 ಕೇಸುಗಳನ್ನು ವಾಪಸ್ ಪಡೆದಿತ್ತು. ಇನ್ಣೂ ತನ್ವೀರ್ ಸೇಠ್ ಜಿಹಾದಿಗಳನ್ನು ತಮ್ಮ ಸಮುದಾಯವನ್ನು ಬೆಂಬಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದು ವೇಳೆ ನೀವು ಜಿಹಾದಿಗಳಿಗೆ ಬೆಂಬಲ ನೀಡಿದರೆ ನಿಮ್ಮನ್ನು ಜಿಹಾದಿ ಸಂಘಟನೆಯ ಒಬ್ಬ ಸದಸ್ಯ ಎಂದು ಭಾವಿಸುತ್ತೇವೆ ಹಾಗೂ ನಿಮಗೆ ಧಿಕ್ಕಾರ ಹಾಕಿ ಬಹಿಷ್ಕರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.