ಉಡುಪಿಯ ನೇತ್ರ ಕಾಲೇಜಿನ ವಿಡಿಯೋ ಚಿತ್ರೀಕರಣ ವಿವಾದ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಪ್ರಕರಣ ಕುರಿತು ಶಾಸಕರು ಮಾತಾನಾಡಿ, ವಿಡಿಯೋ ವಿಚಾರವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಗುರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಸೂಕ್ತ ಸಮಗ್ರ ತನಿಖೆ ಆಗಬೇಕು. ಶೌಚಾಲಯದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವ ಮಾನಸಿಕತೆಯ ಹಿಂದೆ ಸಂಘಟನೆಗಳ ಷಡ್ಯಂತರ ಕೆಲಸ ಮಾಡಿದೆ. ಕೇವಲ ಮೊಕದ್ದಮೆ ದಾಖಲಿಸುವುದು ಅಷ್ಟೇ ಅಲ್ಲ ಇದರ ಹಿಂದೆ ಇರುವ ಷಡ್ಯಂತ್ರ ಬಯಲಿಗೆ ಎಳೆಯಬೇಕು. ಈ ಬಗ್ಗೆ ಮಹಿಳಾ ಆಯೋಗ, ಮಹಿಳಾಪರ ಸಂಘಟನೆ ಧ್ವನಿ ಎತ್ತಬೇಕು ಎಂದು ಶಾಸಕರು ಹೇಳಿದ್ದಾರೆ.