ದೆಹಲಿಯ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿಯವರ ಕಛೇರಿಯಾದ ಕೃಷಿ ಭವನದಲ್ಲಿ ಇಂದು ಮಹತ್ವದ ಸಭೆ ನಡೆಯಿತು.
ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ NAR ಅಧ್ಯಕ್ಷರಾದ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಜಂಟಿ ಕಾರ್ಯದರ್ಶಿ ಕರ್ಮ ಜಿಂಪಾ ಭುಟಿಯಾ ರಾಷ್ಟ್ರೀಯ ಅಕಾಡೆಮಿ ಆಫ್ ರುಡ್ಸೆಟ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯ (MORD ) ನಡುವೆ ಮಹತ್ವದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಈ MoU ಆಗಸ್ಟ್ 1, 2023 ರಿಂದ ಜುಲೈ 31, 2026 ರವರೆಗೆ ಮಾನ್ಯವಾಗಿರುತ್ತದೆ.
ಇನ್ನೂ ಈ ಸಭೆಯಲ್ಲಿ ಜಂಟಿ ನಿರ್ದೇಶಕರು ಸಹಾಯಕಆಯುಕ್ತರಾದ ಕೆಎನ್ ಜನಾರ್ದನ, ಎನ್ಎಆರ್ ಅಧ್ಯಕ್ಷರ ವೈಯಕ್ತಿಕ ಕಾರ್ಯದರ್ಶಿ ಮತ್ತು ವಿಷಯಾಧಾರಿತ ತಜ್ಞರಾದ ಶಿವ ಸೋನಿ, ಮಿಷನ್ ಮ್ಯಾನೇಜರ್ ನವೀನ್ ಕುಮಾರ್, ವಿಶಾಲ್ ಗುಪ್ತಾ, ಕಾನೂನು ಸಲಹೆಗಾರ ಲೋಕೇಶ್ ಸುಖವಾನಿ ಸೇರಿದಂತೆ ಹಲವರು ಭಾಗಿಯಾಗಿದ್ರು.