Wednesday, November 27, 2024
ಸುದ್ದಿ

ಅವ್ಯವಸ್ಥೆಯ ತಾಣವಾಗಿದೆ ಮೂಡುಬಿದಿರೆಯ ಘನತ್ಯಾಜ್ಯ ವಿಲೇವಾರಿ ಘಟಕ – ಕಹಳೆ ನ್ಯೂಸ್

ಮೂಡುಬಿದಿರೆ : ಕಳೆದ ಹತ್ತು ವರ್ಷಗಳ ಹಿಂದೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಸ, ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲೆಂದು ಪುರಸಭಾ ವ್ಯಾಪ್ತಿಯ ಕರಿಂಜೆಯ ಮಾರಿಂಜಗುಡ್ಡೆಯಲ್ಲಿ ನಿರ್ಮಾಣವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವು ಇದೀಗ ತ್ಯಾಜ್ಯ ತುಂಬಿಕೊoಡು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿರುವುದು ಕಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತ ತುಂಬಿಕೊoಡಿರುವ ಪ್ಲಾಸ್ಟಿಕ್, ತ್ಯಾಜ್ಯಗಳ ರಾಶಿ, ವಿಲೇವಾರಿ ಆಗದೆ ಉಳಿದಿರುವ ಗೊಬ್ಬರದ ರಾಶಿ, ಸಿಯಾಳದ ಚಿಪ್ಪುಗಳ ರಾಶಿ, ಕೊಳೆತ ಪದಾರ್ಥಗಳಿಂದ ಹರಿಯುತ್ತಿರುವ ನೀರು, ಅದರ ಮೇಲಿನಿಂದ ಗುಂಯ್ ಹಾರುವ ಸೊಳ್ಳೆಗಳು ಮಳೆಗಾಲದಲ್ಲಿ ಕಂಡು ಬರುವ ರೋಗಗಳಿಗೆ ಆಶ್ರಯ ನೀಡುವಂತಹ ಸನ್ನಿವೇಶ ಕಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಿ. ರತ್ನಾಕರ ದೇವಾಡಿಗ ಅವರು ಪುರಸಭಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕರಿಂಜೆಯ ಮಾರಿಂಜಗುಡ್ಡೆಯಲ್ಲಿ ಸಮರ್ಪಕವಾದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿತ್ತು. ಇದಕ್ಕೂ ಮೊದಲು ಅಧ್ಯಕ್ಷರಾಗಿದ್ದ ದಿ.ಬೋಜ ಕೋಟ್ಯಾನ್ ಅವರ ಸಮಯದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವ ಬಗ್ಗೆ ನಿರ್ಣಯವಾಗಿತ್ತು.

ನಿರ್ಮಾಣವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವು ಮೊದ ಮೊದಲು ಅತ್ಯಂತ ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಆದರೆ ನಂತರದ ದಿನಗಳಲ್ಲಿ ಸ್ವಲ್ಪ ಸ್ವಲ್ಪವೇ ಹದಗೆಡಲು ಆರಂಭಿಸಿತ್ತು.

ಪುರಸಭೆಯ ವಾಹನಕ್ಕೆ ಕಸವನ್ನು ನೀಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ ಇದರಿಂದಾಗಿ ಕಸವೂ ಹೆಚ್ಚಾಗಿ ಸಂಗ್ರಹವಾಗುತ್ತಿದೆ ಆದರೆ ಗೊಬ್ಬರ, ಪ್ಲಾಸ್ಟಿಕ್ ಮಾರಾಟವಾಗದೆ ಹಾಗೇ ಉಳಿದಿರುವುದರಿಂದ ಘಟಕದಲ್ಲಿ ಕಸದ ರಾಶಿಯನ್ನು ಶೇಖರಣೆ ಮಾಡಿಡಲು ಜಾಗದ ಸಮಸ್ಯೆ ಎದುರಾಗಿದೆ.

ಕಳೆದೆರಡು ವರ್ಷಗಳಿಂದಲೇ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸವು ಸಮರ್ಪಕವಾಗಿ ನಿರ್ವಹಣೆಯಾಗುವಲ್ಲಿ ಸೋತಿದೆ. ಇಲ್ಲಿ 46 ಮಂದಿ ಪೌರ ಕಾರ್ಮಿಕರು ದುಡಿಯುತ್ತಿದ್ದಾರೆ ಹಾಗೂ ಪ್ಲಾಸ್ಟಿಕ್ ಗಳನ್ನು ಶೇಖರಣೆ ಮಾಡಿಡಲು ಅಸ್ಸಾಂ ಮೂಲದ 10 ಜನ ಕಾರ್ಮಿಕರು ಇದ್ದಾರೆ.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಸ್ಸಾಂನವರನ್ನು ಹೊರತು ಪಡಿಸಿ 6 ಜನ ಪೌರ ಕಾರ್ಮಿಕರು ದುಡಿಯುತ್ತಿದ್ದು ಆ ಕೊಳೆತು ನಾರುತ್ತಿರುವ ತ್ಯಾಜ್ಯಗಳ ರಾಶಿಗಳ ಮಧ್ಯೆಯೇ ಊಟ, ತಿಂಡಿಯನ್ನು ಮುಗಿಸುತ್ತಿದ್ದಾರೆ.

ಇಲ್ಲಿ ಕಳೆದ 6 ತಿಂಗಳಿನಿAದ ನೀರಿನ ಸಮಸ್ಯೆಯು ಎದುರಾಗಿದ್ದು ಘಟಕದಲ್ಲಿ ತುಂಬಿರುವ ಕೊಳಚೆ ನೀರನ್ನು ಕ್ಲೀನ್ ಮಾಡಲು ಪೌರ ಕಾರ್ಮಿಕರಿಗೆ ಕಷ್ಟ ಸಾಧ್ಯವಾಗಿದೆ. ಅಲ್ಲದೆ ಮೊದಲಿಗೆ ಟೆಂಡರ್ ಆದವರು ಪ್ಲಾಸ್ಟಿಕ್ ಗಳನ್ನು ತೆಗೆದುಕೊಂಡು ಹೋಗದೆ ಇರುವುದರಿಂದ ಘಟಕದ ಸುತ್ತಮುತ್ತ ಪ್ಲಾಸ್ಟಿಕ್ ಗಳದ್ದೇ ರಾಶಿ ತುಂಬಿಕೊAಡಿದೆ. ಇದಲ್ಲದೆ ಕೃಷಿಕರು ಗೊಬ್ಬರವನ್ನು ಖರೀದಿ ಮಾಡದೆ ಇರುವುದರಿಂದ ಅದೂ ಕೂಡಾ ರಾಶಿಯಾಗಿ ತುಂಬಿಕೊAಡಿದೆ ಮತ್ತು ಸಿಯಾಳ ಚಿಪ್ಪುಗಳ ರಾಶಿ ಬಿದ್ದು ಒಳಗಡೆ ಮಳೆಯ ನೀರು ತುಂಬಿಕೊAಡು ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುತ್ತಿದೆ.

ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪುರಸಭಾ ಸದಸ್ಯ ಕೊರಗಪ್ಪ ಅವರು ಪುರಸಭಾಧಿವೇಶಗಳಲ್ಲಿ ಪ್ರತಿಭಾರಿಯೂ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಅಲ್ಲದೆ ಪರಿಸರ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಹೇಳುತ್ತಿದ್ದರು ಆದರೂ ಇದೀಗ ತೀರಾ ಅವ್ಯವಸ್ಥೆಯಿಂದ ಕೂಡಿದ್ದು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಾಡ್ 9 ಸದಸ್ಯ ಸುರೇಶ್ ಕೋಟ್ಯಾನ್ ಅವರು ಕಸ ವಿಲೇವಾರಿ ಕಳೆದೆರಡು ವರ್ಷಗಳಿಂದ ಸರಿಯಾಗಿ ಆಗುತ್ತಿಲ್ಲ. ಪರಿಸರದಲ್ಲಿ ಹತ್ತಾರು ಮನೆಗಳಿದ್ದು ಘಟಕದಲ್ಲಿರುವ ಕೊಳೆತ ಕೋಳಿ ಹಾಗೂ ಇತರ ಮಾಂಸದ ತ್ಯಾಜ್ಯಗಳನ್ನು ನಾಯಿಗಳು ಮನೆಯಂಗಳಕ್ಕೆ ಮತ್ತು ಬಾವಿಗಳಿಗೆ ಹಾಕುತ್ತಿವೆ ಈ ಜನರು ತಮ್ಮ ಬಳಿ ದೂರನ್ನು ನೀಡಿದ್ದಾರೆ. ಅವ್ಯವಸ್ಥೆಯ ತಾಣವಾಗಿರುವ ಇದನ್ನು ಕೂಡಲೇ ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ವಾಮಂಜೂರಿನ ಡಂಪ್ಪಿAಗ್ ಏರಿಯಾದಂತೆ ಕುಸಿಯುವುದು ಖಂಡಿತಾ ಎಂದು ಹೇಳಿರುವ ಅವರು ನಾವು ಜನರ ಪರವಾಗಿ ನಿಂತು ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ.