Saturday, November 23, 2024
ಸುದ್ದಿ

ತುಳುನಾಡಿನ ಗಂಡು ಕಲೆ ಯಕ್ಷಗಾನದಲ್ಲಿ ಸಾಧನೆ ಮಾಡಿದ ಯಕ್ಷಗುರು ಸಂಜೀವ ಸುವರ್ಣ- ಕಹಳೆ ನ್ಯೂಸ್

ಉಡುಪಿ: ಗುರು ಎಂದರೆ ಯಾರು ಜ್ಞಾನವನ್ನು ನೀಡುತ್ತಾರೋ ಅವರನ್ನು ಗುರು ಎಂದು ಕರೆಯುತ್ತೇವೆ. ಆದ್ರೆ ನಿಸ್ವಾರ್ಥವಾಗಿ ಗುರುತ್ವ ದೊರೆಯುವುದು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಇರುವಾಗ. ತಾನು 2ನೇ ತರಗತಿ ಮೆಟ್ಟಿಲೇರಿದ್ದರೂ, ದೇಶದ ಮಟ್ಟಿಲಲ್ಲಿ ನೂರಾರು ಕಡೆ ಹೋಗಿ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಕೇವಲ ವಿಧ್ಯೆಯನ್ನು ಪಸರಿಸುವುದಲ್ಲದೇ ತನ್ನ ಜೀವನದ ಯಶೋಗಾಥೆ ಇಂದಿನ ಪದವಿ ವಿದ್ಯಾರ್ಥಿಗಳ ಪಠ್ಯಪುಸ್ತಕದ ಪಾಠವಾಗಿದೆ. ಅಂತಹ ಸಾಧನೆ ಮಾಡಿದವರು ಉಡುಪಿಯ ಯಕ್ಷಗುರು ಸಂಜೀವ ಸುವರ್ಣ.

ತುಳುನಾಡಿನ ಗಂಡು ಕಲೆ ಯಕ್ಷಗಾನದಲ್ಲಿ ಇವರದ್ದು ಭಾರೀ ದೊಡ್ಡ ಹೆಸರು. ಕಲಾವಿದನಾಗಿ, ಗುರುವಾಗಿ ಯಕ್ಷಗಾನ ಕಲೆಯನ್ನು ಜಗದಗಲ ಪ್ರಚುರಪಡಿಸಿದವರಲ್ಲಿ ಇವರು ಒಬ್ಬರು. ಜ್ನಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದವರು. ಕಲಾವಿದ ಮಾತ್ರವಲ್ಲ, ಬಡ ಮಕ್ಕಳ ಪಾಲಿಗೆ ಅಪ್ಪ-ಅಮ್ಮ, ಗುರು ಎಲ್ಲವೂ ಹೌದು. ಇವರು ಉಡುಪಿಯ ಇಂದ್ರಾಳಿಯಲ್ಲಿ ಯಕ್ಷಗಾನ ಕಲಾಕೇಂದ್ರವನ್ನು ಎಂಜಿಮ್ ಆಶ್ರಯದಲ್ಲಿ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಕೇವಲ ಯಕ್ಷಗಾನ ಪಾಠ ಮಾತ್ರ ನಡೆಯುವುದಲ್ಲ, ಸುಮಾರು 60 ಬಡವಿಧ್ಯಾರ್ಥಿಗಳನ್ನು ಸಾಕಿ ಸಲಹಿ ಶಿಕ್ಷಣಾರ್ಜನೆಯನ್ನು ಕೂಡ ನೀಡುತ್ತಿದ್ದಾರೆ. ಮಕ್ಕಳಿಗೆ ಕಲೆ ಶಿಕ್ಷಣದ ಜೊತೆ ಬದುಕಿನ ಮೌಲ್ಯದ ಪಾಠವನ್ನು ನೀಡುವುದು ನಿಜವಾದ ಗುರುವಿನ ಕೆಲಸ ಎನ್ನುವುದು ಇವರ ಅಭಿಮತ. ಪ್ರಶಸ್ತಿ ಸಮ್ಮಾನದಿಂದ ಮಾರುದ್ದ ಸರಿಯುವ ಸುವರ್ಣರಿಗೆ ಅಭಿಮಾನಿ ಬಳಗ ಕರುಣ ಸಂಜೀವ ಎಂಬ ಕಾರ್ಯಕ್ರಮದ ಮೂಲಕ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತು. ನನ್ನದು ಸಾಧನೆಯಲ್ಲ ವೃತ್ತಿಯ ತಪಸ್ಸು ಅಷ್ಟೇ, ನಿಷ್ಠೆ ಮಾಡುವ ಕಾರ್ಯ ಎಲ್ಲರಿಗೂ ಯಶಸ್ಸು ತಂದು ಕೊಡುತ್ತೆ ಅನ್ನುವುದು ಸಂಜೀವ ಗುರುಗಳ ಅಭಿಪ್ರಾಯ.

ಜಾಹೀರಾತು
ಜಾಹೀರಾತು
ಜಾಹೀರಾತು

2ನೇ ತರಗತಿ ಓದಿ ಬಡತನದ ಬೇಗೆಯ ನಡುವೆ ಯಕ್ಷಗಾನವನೇ ಜೀವಾಳವಾಗಿಸಿ ಕೊಂಡು ಬೆಳೆದವರು ಇವರು. ಕಲೆ ಉಳಿಸುವ ಜೊತೆಗೆ ಬಡಮಕ್ಕಳಿಗೆ ಬದುಕು ಕಟ್ಟಿಕೊಡುವ ಕನಸ್ಸು ಹೊತ್ತವರು. ಈ ಗುರುಕುಲದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಕರೆತಂದಮಕ್ಕಳು ಶಿಕ್ಷಣ, ಯಕ್ಷಗಾನ ತರಬೇತಿಯ ಜೊತೆ ಮಾತೆಯ ಮಡಿಲಿನ ಆಸರೆಯನ್ನು ಗುರುವಿನ ಮಡಿಲಿನಲ್ಲಿ ಪಡೆದಿದ್ದಾರೆ.

ಬನ್ನಂಜೆ ಸಂಜೀವ ಸುವರ್ಣ ದೇಶ ವಿದೇಶದ ಸಾವಿರಾರು ವಿಧ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ಧಾರೆ ಎರೆದವರು. ಬಡತನ ಹಾದಿಯಲ್ಲೇ ಸಾಧಕನಾಗಿ ಬೆಳೆದ ಸುವರ್ಣ ಜೀವನ ಯಶೋಗಾಥೆ ಮಂಗಳೂರು ವಿವಿ ಬಿ ಎ ಪದವಿಗೆ ಬೋಧನ ವಿಷಯವಾಗಿದೆ. ಆ ಮೂಲಕ ಅಕ್ಷರ ಹಂಗಿಲ್ಲದೇಯೂ ಸಾಧಕನಾಗಬಹುದು ತೋರಿಸಿಕೊಟ್ಟವರು ಮಹಾಗುರು ಇವರು.

ಕರಾವಳಿಯಲ್ಲಿ ಯಕ್ಷಗಾನ ಕ್ಕೆ ಮಾತ್ರವಲ್ಲ ಗುರು ಸಂಜೀವ ಸುವರ್ಣರಿಗೂ ಲಕ್ಷಾಂತರ ಅಭಿಮಾನಿಗಳ ಬಳಗವಿರುವುದು ವಿಶಿಷ್ಟ.