Wednesday, November 27, 2024
ಸುದ್ದಿ

ಕೇಂದ್ರ ಸರ್ಕಾರದಿಂದ ಕೋಳಿ ಫಾರಂ ಆರಂಭಿಸುವವರಿಗೆ 50 % ಸಬ್ಸಿಡಿಯೊಂದಿಗೆ 50 ಲಕ್ಷ ಸಾಲ! – ಕಹಳೆ ನ್ಯೂಸ್

ನೀವು ಕೋಳಿ ಫಾರಂ ಸ್ಥಾಪಿಸಿ ಸ್ವಾವಲಂಬಿಯಾಗಬೇಕು ಅಂದುಕೊAಡಿದ್ದರೆ ಇಲ್ಲಿದೆ ನಿಮಗೆ ಅದ್ಭುತ ಅವಕಾಶ ಕೇಂದ್ರ ಸರ್ಕಾರ ನಿಮಗೆ ರೂ. 50 ಲಕ್ಷದವರೆಗೆ ಸಾಲ ನೀಡುತ್ತಿದೆ. 50 ರಷ್ಟು ಸಬ್ಸಿಡಿ ಲಭ್ಯವಿದೆ. ಅಂದರೆ ನೀವು ರೂ. 25 ಲಕ್ಷ ಭರಿಸಿದರೆ ಸಾಕು. ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕೇಂದ್ರೀಯ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಇಲಾಖೆಯು ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ, ಕೇಂದ್ರವು ದೇಶದಲ್ಲಿ ಮಾಂಸ, ಹಾಲು ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಯೋಜನೆಯ ಭಾಗವಾಗಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ವ್ಯಕ್ತಿ, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರ ಸಂಘಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ಸೆಕ್ಷನ್ 8ರ ಅಡಿಯಲ್ಲಿ ಬರುವ ಮೊಟ್ಟೆ ಕೇಂದ್ರಗಳು, ಬ್ರಾಯ್ಲರ್ ಗಳು, ಮಕ್ಕಳ ಪಾಲನೆ ಕೇಂದ್ರಗಳು ಹೀಗೆ ಎಲ್ಲರೂ ಅರ್ಜಿ ಸಲ್ಲಿಸಲು ಅರ್ಹರು.

ಈ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನಿಡುತ್ತವೆ. ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ www.nlm.udayanidhimitra.in/Login portalವೆಬ್ ಸೈಟ್ ಗೆ ಭೇಟಿ ನೀಡಿ.

ಸಾಲ ಪಡೆಯುವವರ ಹೆಸರಿನಲ್ಲಿ ಕನಿಷ್ಠ 1 ಎಕ್ರೆ ಜಮೀನು ಮತ್ತು ಸಂಬAಧಿಸಿದ ದಾಖಲೆ ಇರಬೇಕು. ಸ್ವಂತ ಜಮೀನು ಇಲ್ಲದವರು ಗುತ್ತಿಗೆ ಜಮೀನಿನ ಮೇಲೆ ಸಾಲ ಪಡೆಯಬಹುದು. ವಿವರವಾದ ಯೋಜನಾ ವರದಿಯನ್ನು ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಅದಿಕಾರಿಗಳಿಗೆ ಸಲ್ಲಿಸಬೇಕು.
ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ಜಮೀನಿನ ಫೋಟೋ
ಭೂ ದಾಖಲೆಗಳು
ಮತದಾರರ ಚೀಟಿ
ನಿಮ್ಮ ಖಾತೆಯ ರದ್ದಾದ 2 ಚೆಕ್ ಗಳು
ವಿಳಾಸದ ಪ್ರೂಫ್
ತರಬೇತಿ ಪಡೆದರೆ ಪ್ರಮಾಣಪತ್ರ
ನಿಮ್ಮ ಸ್ಕ್ಯಾನ್ ಮಾಡಿದ ಸಹಿ