Wednesday, November 27, 2024
ಸುದ್ದಿ

ಪಡಿತರ ಚೀಟಿಯಿಂದ ಮೃತರ ಹೆಸರನ್ನು ಹೊರತೆಗೆಯುವಂತೆ ದ.ಕ ಜಿಲ್ಲಾಧಿಕಾರಿ ಆದೇಶ – ಕಹಳೆ ನ್ಯೂಸ್

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಕೆಲವೊಂದು ಕುಟುಂಬಗಳ ಸದಸ್ಯರು ಮೃತರಾಗಿದ್ದರೂ ಕೂಡ ಅವರ ಹೆಸರು ಪಡಿತರದಲ್ಲಿ ತೆಗೆದು ಹಾಕಿರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರೀತಿಯ 13,133 ಫಲಾನುಭವಿಗಳ ಹೆಸರು ಪಡಿತರ ಚೀಟಿಯಲ್ಲಿ ಅಕ್ರಮವಾಗಿ ಉಳಿಸಿರುವುದು ಅಕ್ರಮವಾಗಿದೆ.

ಅಂತಹ ಪಡಿತರ ಚೀಟಿದಾರರು ಮೃತಪಟ್ಟವರ ದಾಖಲಾತಿಯನ್ನು ತಾಲೂಕು ಕಚೇರಿಗೆ ಸಲ್ಲಿಸಿ ಪಡಿತರ ಚೀಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆಸಬೇಕು. ಇಲ್ಲದಿದ್ದರೆ ಅಂತಹವರನ್ನು ನಿಯಮಾನುಸಾರ ಅನರ್ಹಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.