Thursday, January 23, 2025
ಸುದ್ದಿ

ಬಜರಂಗದಳ ಸುರತ್ಕಲ್ ಪ್ರಖಂಡದ ಕಾರ್ಯಕರ್ತ ಮೇಘರಾಜ್ ಚಿಕಿತ್ಸೆಗೆ ನೆರವಾದ ಬಿಜೆಪಿ ಯುವಮೋರ್ಚ ಮಂಗಳೂರು ಉತ್ತರ ಮಂಡಲ -ಕಹಳೆ ನ್ಯೂಸ್

ಬಜರಂಗದಳ ಸುರತ್ಕಲ್ ಪ್ರಖಂಡದ ಕಾರ್ಯಕರ್ತ ಕಳವಾರು ನಿವಾಸಿ ಮೇಘರಾಜ್ ಅವರು ಅಪಘಾತದಿಂದ ತ್ರೀವ ಗಾಯಗೊಂಡು ಎ.ಜೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಘರಾಜ್ ರವರ ಚಿಕಿತ್ಸೆಗೆ ಬಿಜೆಪಿ ಯುವಮೋರ್ಚ ಮಂಗಳೂರು ಉತ್ತರ ಮಂಡಲದಿಂದ ಕಾರ್ಯರ್ತರು ಹಾಗೂ ದಾನಿಗಳಿಂದ ಸಂಗ್ರಹಿಸಿದ 1,60,000 ರೂಪಾಯಿಗಳ ಚೆಕ್ ಅನ್ನು ಮಾನ್ಯ ಶಾಸಕರಾದ ಡಾ ಭರತ್ ಶೆಟ್ಟಿಯವರು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ರಾಜ್ಯ ಯುವ ಮೋರ್ಚ ಕಾರ್ಯದರ್ಶಿ ಶ್ವೇತಾ ಪೂಜಾರಿಯವರ ಸಮ್ಮುಖದಲ್ಲಿ ಮೇಘರಾಜ್ ರವರ ತಂದೆಯವರಿಗೆ ನೀಡಿದರು.

ಈ ಸಂದರ್ಭದಲ್ಲಿ ಯುವಮೋರ್ಚ ಮಂಡಲ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಬಜರಂಗದಳದ ಪ್ರಮುಖರಾದ ನವೀನ್ ಮೂಡು ಶೆಡ್ಡೆ, ಬಿಜೆಪಿಯ ಪ್ರಮುಖರಾದ ಶೋಧನ್ ಅಧ್ಯಪಾಡಿ, ಸಂಜೀತ್ ಶೆಟ್ಟಿ, ತಿಲಕ್ ರಾಜ್, ಹರಿಪ್ರಸಾದ್ ಶೆಟ್ಟಿ, ಸಂಜೀತ್ ಸಾಲ್ಯಾನ್, ದೀಪಕ್ ದೇವಾಡಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.