Thursday, January 23, 2025
ಸುದ್ದಿ

ಬೈಕಿಗೆ ಖಾಸಗಿ ಬಸ್ ಡಿಕ್ಕಿ ; ಯುವಕ ಸಾವು – ಕಹಳೆ ನ್ಯೂಸ್

ಬಂಟ್ವಾಳ : ಖಾಸಗಿ ಬಸ್ ಬೈಕಿಗೆ ಡಿಕ್ಕಿಯಾಗಿ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸಿದೆ ಸಂಜೆ ವೇಳೆ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಲಡ್ಕ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್ ಮೃತಪಟ್ಟ ಯುವಕನಾಗಿದ್ದು. ಮಂಗಳೂರಿನಲ್ಲಿ ಮ್ಯಾಕನಿಕ್ ಕೆಲಸ ಮಾಡುತ್ತಿದ್ದ ಈತ, ನಿನ್ನೆ ರಜಾದಿನವಾದ ಕಾರಣ ಬೆಳಿಗ್ಗೆ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ವಾಪಸು ಮನೆಗೆ ಬರುವ ವೇಳೆ ಕಲ್ಲಡ್ಕ ದಲ್ಲಿ ಅಪಘಾತ ನಡೆದಿದೆ .

ಕಲ್ಲಡ್ಕದಿಂದ ವಿಟ್ಲ ರಸ್ತೆಯಲ್ಲಿ ಹೋಗುವ ವೇಳೆ ವಿಟ್ಲದಿಂದ ಅತೀ ವೇಗದಿಂದ ಬರುತ್ತಿದ್ದ ಸೆಲಿನಾ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಯಾಗಿದ್ದು. ಡಿಕ್ಕಿಯ ರಭಸಕ್ಕೆ ಲತೀಶ್‌ಗೆ ಗಂಭೀರವಾಗಿ ಗಾಯವಾಗಿತ್ತು.ಈತನನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

ಚಿಂತಾಜನಕ ಸ್ಥಿತಿಯಲ್ಲಿದ್ದ ಈತ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಗಂಭೀರ ಸ್ಥಿತಿಯಲ್ಲಿದ್ದ ಲತೀಶ್ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಟ್ರಾಫಿಕ್ ಎಸ್. ಐ.ಸುತೇಶ್ ಸ್ಥಳಕ್ಕೆ ಬೇಟಿ ನೀಡಿದ್ದು,ಪ್ರಕರಣ ದಾಖಲಾಗಿದೆ.