Friday, January 24, 2025
ಸುದ್ದಿ

ಮಣಿಪುರ ಘಟನೆಯನ್ನು ಖಂಡಿಸಿ ಶಿರ್ತಾಡಿಯಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ಮೂಡುಬಿದಿರೆ : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್ ಹಾಗೂ ಸೌಹಾರ್ದ ಫ್ರೆಂಡ್ಸ್ ಶಿರ್ತಾಡಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಶಿರ್ತಾಡಿ ಬಸ್ ಸ್ಟ್ಯಾಂಡ್ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ರಾಜಕೀಯ ಸಂಚಾಲಕ ರಾಜೇಶ್ ಕಡಲಕೆರೆ ದಿಕ್ಸೂಚಿ ಭಾಷಣ ಮಾಡಿ ನಾವು ಬೇರೆ ಬೇರೆ ತಂಡಗಳಾಗುವ ಹೊತ್ತಲ್ಲ ಇದು ಎಲ್ಲರೂ ಒಂದಾಗುವ ಹೊತ್ತು. ಯಾಕೆಂದರೆ ನಾವೆಲ್ಲಾ ಬೇರೆ ಬೇರೆ ತಂಡಗಳಾಗಬೇಕು, ಭಾರತ ದೇಶದಲ್ಲಿ ಬೇರೆ ಪಂಗಡಗಳಾಗಬೇಕು ಅದರ ಮೂಲಕ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಬೇಕು ಅಂತಹ ಸೂಚನೆಯ ಫಲಶ್ರುತಿಯೇ ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿoದ ನಡೆಯುತ್ತಿರುವ ಹಿಂಸಾತ್ಮಕ ಘಟನೆ ಎಂದು ಆರೋಪಿಸಿದರು.

ನಮ್ಮದೇ ಅಣ್ಣ ತಮ್ಮಂದಿರ ಮೇಲೆ, ನಮ್ಮ ದೇಶದ ಪ್ರಜೆಗಳ ಮೇಲೆ ಹಲ್ಲೆಯನ್ನು ನಡೆಸುತ್ತಿರುವವರು, ಬಲಾತ್ಕಾರ ಮಾಡುತ್ತಿರುವವರು ಭಾರತಿಯರೇ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದ್ದು ಈ ಬಗ್ಗೆ ಜಾಗೃತರಾಗಬೇಕಿದೆ ಎಂದರು.