Wednesday, November 27, 2024
ಸುದ್ದಿ

ಹಲವು ಮಾನವೀಯ ಕಾರ್ಯಗಳನ್ನು ಮಾಡುತ್ತಿರುವ ಕರಾವಳಿ ಸಿರಿ ಕ್ಲಬ್ –ಕಹಳೆ ನ್ಯೂಸ್

ಸಣ್ಣದೊಂದು ಕನಸು ದೊಡ್ಡ ಯೋಚನೆ ಮೂಲಕ ಚಿಕ್ಕ ತಂಡದೊಂದಿಗೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ ಹಲವಾರು ಮಾನವೀಯ ಕಾರ್ಯಗಳನ್ನು ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕ್ಲಬ್‌ನ ಉದ್ದೇಶಗಳು ತುಂಬಾನೇ ಅರ್ಥಪೂರ್ಣವಾಗಿದೆ. ಸಂಘಟನೆ ಮೂಲಕ ಬಲಯುತಾರಾಗಿ ಸಮಾಜದಲ್ಲಿರುವ ದುರ್ಬಲರಿಗೆ ಆರ್ಥಿಕ ಸಹಾಯವನ್ನು ನೀಡಬೇಕು ಈ ಮೂಲಕ ದುರ್ಬಲರಿಗೆ ಬೆನ್ನಲುಬಾಗಿ ನಿಲ್ಲಬೇಕು ಎಂಬುವುದು ಇದರ ಉದ್ದೇಶವಾಗಿದೆ.

ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿಯಾಗಬೇಕು, ಶ್ರೇಷ್ಠ ದಾನದಲ್ಲಿ ಒಂದಾದ ರಕ್ತದಾನ ಯೋಜನೆಯನ್ನು ಹಮ್ಮಿಕೊಳ್ಳಬೇಕು, ಸಮಾಜದಲ್ಲಿ ಆರ್ಥಿಕವಾಗಿ ಕಡುಬಡತನ ಸ್ಥಿತಿಯಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವೆಲ್ಲರೂ ಕುಟುಂಬದ ಸದಸ್ಯರಾಗಿ ನೆರವಾಗಬೇಕು, ನಮ್ಮ ನುಡಿ, ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ, ಕ್ರೀಡೆಗೆ ಪ್ರಾಮುಖ್ಯತೆ ಹಾಗೂ ಪ್ರತಿಭಾವಂತ ಬಡ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ನೀಡಬೇಕು, ಪ್ರಕೃತಿಕ ವಿಕೋಪದ ಸಂದರ್ಭದಲ್ಲಿ ಕೈಲಾದ ಸಹಾಯ ಹಾಗೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೈಲಾದ ಆರ್ಥಿಕ ಸಹಾಯ ಮಾಡಬೇಕು.

ಆಶ್ರಮಗಳಿಗೆ ಕೈಲಾದ ಆರ್ಥಿಕ ಸಹಾಯ , ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗೆ ಹೊಸ ರೂಪ ನೀಡುವುದು, ನಿರುದ್ಯೋಗಿಳಿಗೆ ಉದ್ಯೋಗ ಮಾಹಿತ ನೀಡುವುದು ಹಾಗೂ ಉದ್ಯೋಗ ಮೇಳ ಯೋಜನೆ, ಭಾರತೀಯ ಸೇನೆಗೆ ಸೇರಲು ಬಯಸುವ ಬಡ ಯುವಕ ಯುವತಿಯರಿಗೆ ಆರ್ಥಿಕ ಸಹಾಯ, ಕಾರ್ಮಿಕರ ಹಕ್ಕುಗಳ ಪರವಾಗಿ ಧ್ವನಿಯಾಗಬೇಕು, ಶೋಷಣೆ ಒಳಗಾದ ವಿದ್ಯಾರ್ಥಿಗಳ ಪರ ನಿಲ್ಲುವುದು, ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮ ಇಂತಹ ಸಮಾಜಕ್ಕೆ ಉತ್ತಮವಾಗುವ ಕಾರ್ಯ ಮಾಡುವ ಉದ್ದೇಶವನ್ನು ಈ ಕರಾವಳಿ ಸಿರಿ ಕ್ಲಬ್ ಹೊಂದಿದೆ.