Wednesday, November 27, 2024
ಸುದ್ದಿ

ಯಕ್ಷ ಸಂಭ್ರಮ ಹಿರಿಯ ಕಲಾವಿದರಾದ ಕೃಷ್ಣ ರಾವ್, ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ಯಕ್ಷದೇವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡುಬಿದಿರೆ: ಕನ್ನಡ ಭವನದಲ್ಲಿ ನಡೆದ ಬೆಳುವಾಯಿ ಯಕ್ಷದೇವ ಮಿತ್ರ ಕಲಾ ಮಂಡಳಿಯ 26ನೇ ವರ್ಷದ ಯಕ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ರಾಮಕೃಷ್ಣ ರಾವ್ ರೆಂಜಾಳ ಮತ್ತು ನಾರಾಯಣ ಶೆಟ್ಟಿ ಪೆರುವಾಯಿಯವರಿಗೆ “ಯಕ್ಷದೇವ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿಯಕ್ಷಗಾನ ಕರಾವಳಿಯ ಗಂಡು ಕಲೆ ಎನ್ನುವುದಕ್ಕಿಂತ ಅದು ಕರ್ನಾಟಕದ ಗಂಡು ಕಲೆ ಎನ್ನುವುದೇ ಅರ್ಥಪೂರ್ಣ. ರಾಜ್ಯದಲ್ಲಿ 84ರಷ್ಟು ಕಲಾ ಪ್ರಕಾರಗಳಲ್ಲಿ ಯಕ್ಷಗಾನವನ್ನು ಮೀರಿದ ಪ್ರಕಾರವಿಲ್ಲ. ಒಂದು ಕಾಲಕ್ಕೆ ಪೌರಾಣಿಕ ಪ್ರಸಂಗಗಳಿಗೆ ಬೇಡಿಕೆಯಿಲ್ಲ ಎನ್ನುವ ವಾತಾವರಣ ಸೃಷ್ಟಿಯಾದರೂ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಚೇತರಿಸಿಕೊಂಡ ಯಕ್ಷಗಾನ ಕಲೆ ಯಲ್ಲಿ ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳುತ್ತಿದ್ದು ಇದೀಗ ಈ ಕಲೆ ವಿಶ್ವ ಮಾನ್ಯತೆ ಪಡೆಯುತ್ತಿದೆ ಅಭಿಪ್ರಾಯಪಟ್ಟರು.

ಯುವ ಯಕ್ಷಗಾನ ಕಲಾವಿದೆ ರಂಜಿತಾ ಎಲ್ಲೂರು ಅವರಿಗೆ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಎಂಆರ್ ಪಿಎಲ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಬಿ.ಹೆಚ್ ವಿ.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಉಡುಪಿಯ ಇಂಚರ ಸರ್ಜಿಕಲ್ಸ್ ಕ್ಲಿನಿಕ್ನ ಡಾ.ವೈ ಸುದರ್ಶನ್ ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಯಮಿ ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು. ಯಕ್ಷಸಂಗಮದ ಸಂಚಾಲಕ ಶಾಂತರಾಮ್ ಕುಡ್ವ ಅಭಿನಂದನಾ ಮಾತುಗಳನ್ನಾಡಿದರು. ಯಕ್ಷದೇವ ಮಿತ್ರಕಲಾಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ಬೈಪಡಿತ್ತಾಯ ಸನ್ಮಾನಪತ್ರ ವಾಚಿಸಿದರು. ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು. ಮಹಾವೀರ ಪಾಂಡಿ ವಂದಿಸಿದರು.