ಕಲ್ಲಡ್ಕ : ಶಿಕ್ಷಕರು ಮನಸ್ಸು ಮಾಡಿದರೆ ಒಂದು ಶಾಲೆಯನ್ನು ಯಾವ ಮಟ್ಟಕ್ಕಾದರೂ ಕೊಂಡು ಹೋಗಬಹುದು, ಪೆÇೀಷಕರು ಶಿಕ್ಷಕರ ಮೇಲೆ ಇಟ್ಟ ನಂಬಿಕೆಯನ್ನು ಉಳಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಒಂದು ಸಂಸ್ಥೆಯ ಶಿಕ್ಷಕ ತನ್ನ ಜೊತೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ಸಹಕಾರ ಪಡೆದು ಸಂಸ್ಥೆ ಯು ಭೌತಿಕ ಅಭಿವೃದ್ಧಿಗೆ ಕಾರಣರಾಗುತ್ತಾರೆ, ನಿನ್ನ ಕಮ9ವನ್ನು ಒಳ್ಳೆಯ ಮನಸ್ಸಿನಿಂದ ನೀನು ಮಾಡು ಫಲಾಪೇಕ್ಷೆ ಯನ್ನು ಮಾಡದಿರು ಆಗ ಉತ್ತಮ ಫಲ ಖಂಡಿತಾ ಸಿಗಲಿದೆ ಎಂದು ಬಿ. ಆರ್. ಪಿ ಆಗಿದ್ದ ನಿವೃತ್ತ ಶಿಕ್ಷಕ ಶ್ರೀಯುತ ನಾರಾಯಣ ಗೌಡ ರವರು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ಇಲ್ಲಿ ನಡೆದ “ಗುರುವಂದನಾ” ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಯನ್ ಸಂತೋμï ಶೆಟ್ಟಿ ಪೆಲತ್ತಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಯನ್ನು ಊರಿನ ಎಲ್ಲಾ ಹಿರಿಯ ವಿದ್ಯಾರ್ಥಿಗಳ ಸಹಕಾರ ಪಡೆದು ಮೂರು ಪಟ್ಟು ಹೆಚ್ಚು ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡಿರುವ ಇಂತಹ ಸಂದರ್ಭದಲ್ಲಿ ಒಮ್ಮೆಲೆ ಎರಡು ಮಂದಿ ಶಿಕ್ಷಕರು ಸೇವಾನಿವೃತ್ತಿ ಹಾಗೂ ವರ್ಗಾವಣೆ ತುಂಬಾ ಬೇಸರದ ವಿಷಯ, ಶಿಕ್ಷಕರಿಗೆ ಇದೆಲ್ಲ ಅನಿವಾರ್ಯ, ಆದರೂ ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಿ ಕೂಡಲೇ ಬದಲಿ ಶಿಕ್ಷಕರನ್ನು ನೀಡಿ ಶಾಲೆಯ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ನಾವು ಎಂಥ ವ್ಯವಸ್ಥೆ ಮಾಡಿದರು ಪೆÇೀಷಕರಿಗೆ ತಕ್ಕಂತೆ ಗುಣಮಟ್ಟದ ಶಿಕ್ಷಣ ಕೊಡಲು ಶಿಕ್ಷಕರಿಂದಲೇ ಮಾತ್ರ ಸಾಧ್ಯ ವೆಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾದ ಶ್ರೀಯುತ ಶಿವಪ್ರಸಾದ್ ಶೆಟ್ಟಿರವರು ಏನೂ ತಿಳಿಯದ ಒಂದು ಸಾಮಾನ್ಯನನ್ನು ಜೀವನದ ಮೌಲ್ಯ ದ ಮೂಲಕ ಗುರಿ ಸಾಧನೆಗೆ ಮಾಗ9 ತೋರುವವನೇ ಗುರು, ಶಿಕ್ಷಣದ ಯಜ್ಞದ ಸ್ವತ್ತು ಗುರು ತಾನು ಉರಿದು ವಿದ್ಯಾರ್ಥಿ ಗಳ ಮೂಲಕ ಜಗತ್ತಿಗೆ ಬೆಳಕು ನೀಡುವ ಗುರುವಿಗೆ ಎಷ್ಟು ನಮಿಸಿದರೂ ಸಾಲದು ಎಂದು ತಿಳಿಸಿದರು.
ನಿವೃತ್ತಿ ಹೊಂದುತ್ತಿರುವ ಶಿಕ್ಷಕಿ ಶ್ರೀಮತಿ ಗಾಯತ್ರಿ ದೇವಿ ತನ್ನ ಶಿಕ್ಷಕ ವೃತ್ತಿಯ 27 ವರ್ಷದ ಸೇವೆಯ ಬಗ್ಗೆ ಮಾಹಿತಿ ಹಂಚಿಕೊಂಡು
ಶಾಲೆಗೆ 25 ಫೈಬರ್ ಕುಚಿ9ಗಳನ್ನು,ಮಕ್ಕಳಿಗೆ ಕಿಟ್, ಎಲ್ಲಾ ಶಿಕ್ಷಕರಿಗೆ ಡ್ರೆಸ್ ಹಾಗೂ ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕಿ ಶ್ರೀಮತಿ ಮಂಜುಳಾ ತನ್ನ ಸುದೀರ್ಘ 12 ವರ್ಷಗಳ ಕೆಲಿಂಜ ಶಾಲೆಯಲ್ಲಿತನಗೆ ಸಹಕಾರಕೊಟ್ಟ ಶಾಲಾ ಶಿಕ್ಷಕರನ್ನು ಹಾಗೂ ಗ್ರಾಮಸ್ಥರನ್ನು ಸ್ಮರಿಸಿ ಶಾಲಾ ಬಿಸಿ ಊಟಕ್ಕೆ ವ್ಯವಸ್ಥೆಗೆ ಮಿಕ್ಸರ್ ಗ್ರೈಂಡರ್ ಹಾಗೂ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಕಿಟ್, ಶಿಕ್ಷಕರಿಗೆ ಕಿಟ್ ಕೊಡುಗೆಯಾಗಿ ನೀಡಿದರು.
ಕಾಯ9ಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಹಾಗೂ ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕಿಯರನ್ನು ಶಾಲಾ ವತಿಯಿಂದ ಹಾಗೂ ಬಂಟ್ವಾಳ ತಾಲೂಕು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಬೇಬಿ ಆಳ್ವಾ ಕಂಪದಬೈಲು ಇವರು ಪ್ರಶೀತ ಹಳೆ ವಿದ್ಯಾರ್ಥಿನಿ ಕೊಡುಗೆಯಾಗಿ ನೀಡಿರುವ ಬೆಲ್ಟ್ ಮತ್ತು ಬ್ಯಾಡ್ಜ್ ಗಳನ್ನು ಶಾಲೆಯ ಎಲ್ಲಾ ಮಕ್ಕಳಿಗೂ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶೀಲಾ ನಿರ್ಮಲ ವೇಗಸ್,ಸದಸ್ಯರುಗಳಾದ ಜಯಪ್ರಸಾದ್, ಸಂದೀಪ್, ಉಮಾವತಿ,ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ,ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಹಾಗೂ ಎನ್.ಪಿ.ಯಸ್. ಸಂಘದ ಅಧ್ಯಕ್ಷ ಶ್ರೀಯುತ ಸಂತೋμï ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಶ್ರೀಯುತ ಯತೀಶ್,ಸದಸ್ಯರಾದ ವಿಶ್ವನಾಥ ಗೌಡ, ಇಸ್ಮಾಯಿಲ್ ಕೆ , ಶಿಕ್ಷಣ ಸಂಯೋಜಕಿ ಶ್ರೀಮತಿ ಪ್ರತಿಮಾ, ಬಿ .ಐ. ಅರ್. ಟಿ ಶ್ರೀ ರವೀಂದ್ರ,ದಕ್ಷಿಣ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಉಪಾಧ್ಯಕ್ಷ ನವೀನ್,ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಜ್ಯೋತಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘ ದ ಪ್ರಧಾನ ಕಾರ್ಯಧರ್ಶಿ ಶ್ರೀ ಸಂತೋμï ಶೆಟ್ಟಿ ಸೀನಾಜೆ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕ ಶ್ರೀ ತಿಮ್ಮಪ್ಪ ನಾಯ್ಕ್ ಸ್ವಾಗತಿಸಿ, ಅತಿಥಿ ಶಿಕ್ಷಕಿಯರಾದ ಅಶ್ವಿತಾ ಮತ್ತು ಪ್ರಣಿತ ಸನ್ಮಾನಪತ್ರ ವಾಚಿಸಿದರು,ಅತಿಥಿ ಶಿಕ್ಷಕಿ ನಳಿನಾಕ್ಷಿ ವಂದಿಸಿದರು, ಶಿಕ್ಷಕಿ ಶ್ರೀಮತಿ ಉμÁ ಸುವರ್ಣ ಕಾರ್ಯಕ್ರಮ ನಿರೂಪಿಸಿದರು, ಕೆ ಜಿ ಶಿಕ್ಷಕಿ ರೋಶನಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಮಕ್ಕಳ ಪೆÇೀಷಕರು, ಉಪಸ್ಥಿತರಿದ್ದರು